
ಎಂಆರ್‌ಪಿಎಲ್ ಉದ್ಯೋಗಿ ಆತ್ಮಹತ್ಯೆ
Friday, November 15, 2024
ಮೂಲ್ಕಿ: ಬಳ್ಕುಂಜೆ ನಂದಿನಿ ಮಿಲ್ಕ್ ಡೈರಿ ಬಳಿಯ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ
ಮೃತ ಯುವಕನನ್ನು ಸ್ಥಳೀಯ ನಿವಾಸಿ ಅರುಣ್ ಕುಮಾರ್ (36) ಎಂದು ಗುರುತಿಸಲಾಗಿದೆ.
ಮೃತ ಅರುಣ್ ಕುಮಾರ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕ ಖಿನ್ನತೆಯಿಂದ ಒಳಗಾಗಿ ನವೆಂಬರ್ 14ರಂದು ರಾತ್ರಿ ನಾನು ಮಲಗುವ ಕೋಣೆಯ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಮೃತ ಅರುಣ್ ಕುಮಾರ್ ಸುರತ್ಕಲ್ ಎಂ ಆರ್ ಪಿ ಎಲ್ ನಲ್ಲಿ ಕೆಲಸ ಮಾಡುತ್ತಿದ್ದು ಕಳೆದ ವರ್ಷಗಳ ಹಿಂದೆ ಎಂ ಆರ್ ಪಿ ಎಲ್ ಕಂಪನಿಗೆ ಪೆರ್ಮುದೆಯಲ್ಲಿ ಭೂ ಸ್ವಾಧೀನವಾಗುವಾಗ ಬಳ್ಕುಂಜೆಯಲ್ಲಿ ಬಂದು ನೆಲೆಸಿದ್ದರು.
ಮೃತರ ಅಣ್ಣ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.