ಪೊಳಲಿ ಸೇತುವೆ ದುರಸ್ತಿ
Saturday, November 16, 2024
ಮಂಗಳೂರು: ಪೊಳಲಿ ಸೇತುವೆ 6.10 ಕೋಟಿ, ಉಳಾಯಿಬೆಟ್ಟು 5 ಕೋಟಿ ರೂ.ನಲ್ಲಿ ದುರಸ್ತಿ ಶಿಥಿಲಗೊಂಡಿರುವ ಅಡ್ಡೂರು- ಪೊಳಲಿ ಸೇತುವೆಯನ್ನು 6.10 ಕೋಟಿ ರೂ. ಹಾಗೂ ಉಳಾಯಿಬೆಟ್ಟು ಸೇತುವೆಯನ್ನು 5 ಕೋಟಿ ರೂ. ದುರಸ್ತಿಗೊಳಿಸುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿಯವರ ಜತೆಗೂ ಚರ್ಚಿಸಲಾಗಿದ್ದು, ಬೆಂಗಳೂರಿನಲ್ಲಿ ಈ ಬಗ್ಗೆ ಚರ್ಚಿಸಿ ಶಾರ್ಟ್ಟರ್ಮ್ ಟೆಂಡರ್ ಮೂಲಕ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಸುಮಾರು 60 ಕೋಟಿರೂ. ಅಗತ್ಯವಿದ್ದು, ಇದಕ್ಕೂ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.