ಕಾರ್ತಿಕ್ ಭಟ್‌ನಿಂದ ಮೋಸ ಎಫ್‌ಐಆರ್ ದಾಖಲು
ಮುಲ್ಕಿ: ಪಕ್ಷಿಕೆರೆಯಲ್ಲಿ ನಡೆದ ಕೊಲೆ ಮತ್ತು ಅತ್ಮಹತ್ಯೆಗೆ ಸಂಬಂಧಿಸಿದಂತೆ, ಕಾರ್ತಿಕ್ ಭಟ್‌ನಿಂದ ಮೋಸ ಹೋದ ಪಕ್ಷಿಕೆರೆ ಹೊಸಕಾಡು ನಿವಾಸಿ ಮಹಮ್ಮದ್ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.
ಮಹಮ್ಮದ್ ಅವರು ಸುರತ್ಕಲ್ ಸುಬ್ರಮಣ್ಯ ಸೊಸೈಟಿಯಲ್ಲಿ ತನ್ನ ಚಿನ್ನದ ಒಡವೆ ಮೇಲೆ 3 ಲಕ್ಷ 4 ಸಾವಿರ ಸಾಲ ಪಡೆದಿದ್ದು, ಸಾಲದ ಬಡ್ಡಿ ಮೊತ್ತ ಮೂರು ತಿಂಗಳಿಗೊಮ್ಮೆ 9120 ರೂ.ವನ್ನು ಬ್ಯಾಂಕ್ ಮ್ಯಾನೇಜರ್ ಕಾರ್ತಿಕ್ ಭಟ್ ಅವರ ಕೈಗೆ ಕೊಡುತ್ತಿದೆ, ಕಾರ್ತಿಕ್ ಅತ್ಮಹತ್ಯೆ ಮಾಡಿದ ನಂತರ ಸೊಸೈಟಿಗೆ ಹೋಗಿ ವಿಚಾರಿಸಿದಾಗ 2023 ರ ಜೂನ್ 20ರಂದು ಅಂದರೆ ಎಂಟು ತಿಂಗಳ ಬಳಿಕ ಇದರ ಬಡ್ಡಿ ಸಮೇತ ಪಾವತಿಸಿ ಬಿಡಿಸಿಕೊಳ್ಳಲಾಗಿದೆ ಎಂದು ಮಹಮ್ಮದ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಸಹಿ ಪೋರ್ಜರಿ ಮಾಡಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಚಿನ್ನದ ಒಡವೆಯನ್ನು ಬಿಡಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ವಿವರಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸ್ಥಳೀಯ ವ್ಯಕ್ತಿಯೋರ್ವರ ಚಿನ್ನದ ಉಂಗುರವನ್ನು ಇದೇ ಸೊಸೈಟಿಯಲ್ಲಿ ಕಾರ್ತಿಕ್ 50 ಸಾವಿರಕ್ಕೆ ಅಡವಿರಿಸಿದ್ದು, ಈ ಬಗ್ಗೆಯೂ ದೂರು ನೀಡಲಾಗಿದೆ.
ಕಾರ್ತಿಕ್ ಮತ್ತು ಅವರ ತಂದೆ ತಾಯಿ ವಾಸಿಸುತ್ತಿದ್ದ ಮನೆಯಲ್ಲಿ ಈಗ ಯಾರೂ ಇಲ್ಲ, ಕಾರ್ತಿಕ್ ರೂಮಿಗೆ ಪೊಲೀಸಿನವರು ಬೀಗ ಹಾಕಿದ್ದರೆ, ಕಾರ್ತಿಕ್ ತಂದೆ ತನ್ನ ಅಳಿಯನ ಮನೆಯಲ್ಲಿ ವಾಸವಿದ್ದು ಕಾರ್ತಿಕ್ ಮನೆಯಲ್ಲಿ ನೀರವ ಮೌನ ಆವರಿಸಿದೆ.