
‘ಕನಕದಾಸ’ ಪ್ರಶಸ್ತಿಗೆ ಆಯ್ಕೆ
Friday, November 15, 2024
ಮಂಗಳೂರು: ಕಲ್ಕೂರ ಪ್ರತಿಷ್ಠಾನ ಆಯೋಜಿಸಲಿರುವ ‘ಕನಕದಾಸ ಜಯಂತ್ಯೋತ್ಸವ’ ಸಮಾರಂಭದಲ್ಲಿ ನೀಡಲಾಗುವ ‘ಕನಕದಾಸ ಪ್ರಶಸ್ತಿ’ಗೆ ಪ್ರಸಿದ್ಧ ದಾಸ ಕೀತರ್ನಕಾರ ರಾಮಕೃಷ್ಣ ಕಾಟುಕುಕ್ಕೆ ರವರನ್ನು ಆಯ್ಕೆ ಮಾಡಲಾಗಿದೆ.
ನ.19ರಂದು ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಾಸಾದ’ ನಿಲಯದ ವಾದಿರಾಜ ಮಂಟಪದಲ್ಲಿರುವ, ವಿಶ್ವೇಶ ತೀರ್ಥ ವೇದಿಕೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ‘ಕನಕದಾಸ ಪ್ರಶಸ್ತಿ’ ಪ್ರದಾನ ಮಾಡಲಿರುವರೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.