
ರಾಷ್ಟ್ರೀಯ ಕಾನೂನು ಸೇವೆಗಳ ದಿನ
ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ದ.ಕ ಜಿಲ್ಲೆ ಹಾಗೂ ಮಂಗಳೂರು ವಕೀಲರ ಸಂಘ(ರಿ) ಮಂಗಳೂರು ಇವರುಗಳ ಸಹಯೋಗದೊಂದಿಗೆ ನ.೯ ರಂದು ‘ರಾಷ್ಟ್ರೀಯ ಕಾನೂನು ಸೇವೆಗಳ ದಿನ’ವನ್ನು ಮಂಗಳೂರಿನ ಬಲ್ಮಠದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಅಭಯ್ ಧನ್ ಪಾಲ್ ಚೌಗಲ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ-1987ನ್ನು 1995 ನವೆಂಬರ್ 9 ರಂದು ಜಾರಿಗೆ ತರಲಾಯಿತು. ಈ ವಿಶೇಷ ದಿನದಂದು ದೇಶಾದ್ಯಂತ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತದೆ. ಮಕ್ಕಳಿಂದ ಹಿಡಿದು ಸಮಾಜದ ದುರ್ಬಲ ವರ್ಗದ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ. ವಿದ್ಯಾರ್ಥಿಗಳಿಗೆ ಪ್ರಮುಖ ಕಾನೂನು ಸೇವೆಗಳ ಬಗ್ಗೆ ಅರಿವು ಅಗತ್ಯವಿದೆ ಎಂದು ಹೇಳಿದರು.
ಮಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ. ಮಾತನಾಡಿ, ಕಾನೂನು ಪ್ರಾಧಿಕಾರದ ಮೂಲಕ ಉಚಿತವಾಗಿ ದೊರೆಯುವ ಕಾನೂನು ಸೇವೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್.ವಿ., ಮುಖ್ಯ ಕಾನೂನು ಅಭಿರಕ್ಷಕ ವಾಸುದೇವ ಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪಮುಖ್ಯ ಕಾನೂನು ಅಭಿರಕ್ಷಕ ಶುಕರಾಜ್ ಎಸ್. ಕೊಟ್ಟಾರಿ, ಸಹಾಯಕ ಕಾನೂನು ಅಭಿರಕ್ಷಕಿ ಸ್ವಾತಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ವನಿತ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷ ಉಪನ್ಯಾಸಕಿ ಸ್ಮಿತಾ ಎ. ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭಾಷ ಉಪನ್ಯಾಸಕಿ ಯಶೋಧ ಕೆ. ವಂದಿಸಿದರು. ಉಪನ್ಯಾಸಕರಾದ ಉಮೇಶ ಕೆ.ಆರ್., ಅಶೋಕ ಭಂಡಾರಿ, ಸಂತೋಷ ಸಿ., ಪ್ರೇಮಲತ, ಸೌಜನ್ಯ, ಪ್ರಭಾಕರ ಎಸ್.ಬಿ., ಬಾಲಕೃಷ್ಣ ಡಿ., ಶಕುಂತಳ ಉಪಸ್ಥಿತರಿದ್ದರು.