ಮಂಗಳೂರಿನಲ್ಲಿ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಹಾಸಭೆ

ಮಂಗಳೂರಿನಲ್ಲಿ ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಹಾಸಭೆ


ಮಂಗಳೂರು: ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಸಭೆಯನ್ನು ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮೂಡುಶೆಡ್ಡೆ ಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಹಾಸ್ಟೆಲ್ ಸಭಾಭವನ ಭಾನುವಾರ  ನಡೆಯಿತು

ಸಭೆಯಲ್ಲಿ ಸಂಘಟನೆಯ ಉದ್ದೇಶದ ಬಗ್ಗೆ ಮತ್ತು ಬೈಲಾದ ಬಗ್ಗೆ ಸಂಘಟನೆಯ ಗೌರವ ಸಲಹೆಗರರಾದ ನರೇಶ್ ಕುಮಾರ್ ಸಸಿಹಿತ್ಲು ಇವರು ಪ್ರಾಸ್ತಾವಿಕ ಮಾತನಾಡಿದರು.

ಸಂಘಟನೆಯ ಗೌರವಾಧ್ಯಕ್ಷ ರಮೇಶ್ ಕಲ್ಮಾಡಿ ಮಾತನಾಡಿ, ಭಜನಾ ಸ್ಪರ್ಧೆಯ ಬಗ್ಗೆ ಚೌಕಟ್ಟು ಯಾಕೆ ಬೇಕು ಎನ್ನುವ ಬಗ್ಗೆ  ಮಾಹಿತಿ ನೀಡಿದರು.

ಪ್ರಧಾನ ಕಾರ್ಯದರ್ಶಿ  ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಮಾತನಾಡಿ, ಭಜನಾ ತರಭೇತುದಾರರು, ತೀರ್ಪುಗಾರರು, ಭಜನಾ ಸಂಘಟಕರು ಎಲ್ಲರೂ ಒಂದೇ ಸೂರಿನಡಿಯಲ್ಲಿ ಸೇರಬೇಕು, ಭಜನಾ ಮಂಡಳಿಗಳಿಗೆ ಮತ್ತು ಭಜಕರಿಗೆ ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳು ಸಿಗಬೇಕಾದರೆ ಸಂಘಟನೆಯ ಅವಶ್ಯಕತೆ ಇದೆ ಎಂದು ಸಂಘಟನೆಯ  ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ತಾಲೂಕು ಸಮಿತಿಯನ್ನು ಸಭೆಯಲ್ಲಿಯೇ ರಚನೆ ಮಾಡಲಾಯಿತು ಹಾಗೂ ಬಾಕಿ ಉಳಿದ ಎಲ್ಲಾ ತಾಲೂಕು ಸಮಿತಿಗಳನ್ನು ಅತೀ ಶೀಘ್ರದಲ್ಲಿ ಆಯಾ ತಾಲೂಕಿನಲ್ಲಿಯೇ ಭಜಕರನ್ನು ಸೇರಿಸಿ ರಚನೆ ಮಾಡುವುದೆಂದು ನಿರ್ಧರಿಸಿ, ಸಂಘಟನೆಯ ಬಗ್ಗೆ ಎಲ್ಲರ ಅಭಿಪ್ರಾಯಗಳನ್ನು ಪಡೆದು, ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸಮಿತಿಯ ಪದಗ್ರಹಣ ಕಾರ್ಯಕ್ರಮ ಮತ್ತು ಸಂಘಟನೆಯ ಅಧಿಕೃತ ಉದ್ಘಾಟನೆಗೊಂಡು ಕರಾವಳಿ ಭಜನಾ ಸಂಸ್ಕಾರ ವೇದಿಕೆ ಸಂಘಟನೆಯನ್ನು ಬಲಿಷ್ಠಗೊಳಿಸುವುದೆಂದು ಸಂಘಟಕರು ತಿಳಿಸಿದರು.

 ಜೊತೆ ಕಾರ್ಯದರ್ಶಿ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಪದಾಧಿಕಾರಿಗಳಾದ ಶೋಭಾ ವಿ ಐತಾಳ್, ಅಶೋಕ್ ನಾಯ್ಕ್, ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಕಡಾರಿ, ಪ್ರಧಾನ ಕಾರ್ಯದರ್ಶಿ ಪ್ರನೀತ್ ಕಲ್ಯಾ, ದಕ್ಷಿಣ ಕನ್ನಡ ಜಿಲ್ಲೆಯ ಭಜನಾ ತರಭೇತುದಾರರು, ತೀರ್ಪುಗಾರರು, ಭಜನಾ ಸಂಘಟಕರು ಹಾಗೂ  ಭಜಕರು ಈ ಸಂದರ್ಭದಲ್ಲಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article