ಅಡಿಕೆ ಕ್ಯಾನ್ಸರ್ ಕಾರಕವೆಂದು ತಿರುಚಿದ ವರದಿ ಪ್ರಕಟಿಸಿದ ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರದ ಮಧ್ಯ ಪ್ರವೇಶಕ್ಕೆ ಕ್ಯಾಂಪ್ಕೊ ಆಗ್ರಹ

ಅಡಿಕೆ ಕ್ಯಾನ್ಸರ್ ಕಾರಕವೆಂದು ತಿರುಚಿದ ವರದಿ ಪ್ರಕಟಿಸಿದ ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರದ ಮಧ್ಯ ಪ್ರವೇಶಕ್ಕೆ ಕ್ಯಾಂಪ್ಕೊ ಆಗ್ರಹ


ಮಂಗಳೂರು: ಲಕ್ಷಾಂತರ ಅಡಿಕೆ ಬೆಳೆಗಾರರನ್ನು ಪ್ರತಿನಿಧಿಸುತ್ತಿರುವ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ, ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತು ಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಿರುವುದಕ್ಕೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. 

ಈ ರೀತಿಯ ವರದಿಗಳನ್ನು ತಿರುಚಿರುವ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್‌ಸಿ ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.

ಮೂಲ ಸಂಶೋಧನಾ ವರದಿಗಳಲ್ಲಿ ತಂಬಾಕು ಸೇವನೆಯ ಪರಿಣಾಮದ ಕುರಿತು ಕೇಂದ್ರೀಕರಿಸಿ ಸಂಶೋಧನೆ ನಡೆಸಲಾಗಿತ್ತು, ಹಾಗಿದ್ದರೂ ಅಡಿಕೆ ಕ್ಯಾನ್ಸರ್ ಕಾರಕವೆಂದು ಬಿಂಬಿಸುವ ಸಲುವಾಗಿ ಮಾದರಿ ಸಂಖ್ಯೆ ಮತ್ತು ಶೀರ್ಷಿಕೆಯನ್ನು ತಿರುಚಿ ವರದಿ ಪ್ರಕಟಿಸಿರುವ ಡ್ಲ್ಯೂಹೆಚ್‌ಓ ಮತ್ತು ಐಎಆರ್‌ಸಿಯ ಕ್ರಮ ಅಕ್ಷಮ್ಯ. ಇದು ಅಡಿಕೆ ಕೃಷಿಯನ್ನೆ ಜೀವನಾಧಾರವಾಗಿ ನಂಬಿರುವ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ವರ್ಗೀಕರಿಸುವುದರ ಕುರಿತು ನ್ಯಾಯೋಚಿತ ವಿಮರ್ಶೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಕೇಂದ್ರ ಸಚಿವರಲ್ಲಿ ವಿನಂತಿ ಮಾಡಲಾಗಿದೆ.

‘ಅಡಿಕೆ ಲಕ್ಷಾಂತರ ಜನರ ಜೀವನದ ಆಧಾರಸ್ಥಂಭ. ಅದರ ತಪ್ಪಾದ ವರ್ಗೀಕರಣದಿಂದ ಅದನ್ನೆ ನಂಬಿ ಬದುಕುತ್ತಿರುವ ಜನರ ಜೀವನ ಹಾಳಾಗುವುದಲ್ಲದೇ, ಅಡಿಕೆಯ ವೈಜ್ಞಾನಿಕ ಉಪಯೋಗಗಳಿಂದ ಸಮಾಜ ವಂಚಿತವಾಗಲಿದೆ’ ಲಕ್ಷಾಂತರ ಜನರಿಗೆ ಜೀವನ ಕಟ್ಟಿ ಕೊಟ್ಟಿರುವ ಅಡಿಕೆಯ ತಪ್ಪು ವರ್ಗೀಕರಣವನ್ನು ಸರಿಪಡಿಸಿ ರೈತರ ಬದುಕಿನ ದಾರಿದೀಪವಾಗುವಂತೆ ಮಾಡಲು ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಕ್ಯಾಂಪ್ಕೊ ಪ್ರಕಟಣೆಯಲ್ಲಿ ವಿನಂತಿ ಮಾಡಿಕೊಂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article