
ಎಸ್.ಜೆ.ಇ.ಸಿ. ಬಾಂಬೂ ಸೊಸೈಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ಸಸ್ಟೈನಬಲ್ ಎಂಜಿನಿಯರಿಂಗ್ ಕ್ಲಬ್ ಪ್ರಾರಂಭ
ಮಂಗಳೂರು: ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ(ಎಸ್.ಜೆ.ಇ.ಸಿ), ನ.22 ರಂದು ಬಾಂಬೂ ಸೊಸೈಟಿ ಆಫ್ ಇಂಡಿಯಾದೊಂದಿಗೆ ಸಂಯೋಜಿತವಾಗಿರುವ ತನ್ನ ಸುಸ್ಥಿರ ಎಂಜಿನಿಯರಿಂಗ್ ಕ್ಲಬ್ನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಉದ್ಯಮ ಇನ್ನೋವೇಶನ್ ಗ್ರೂಪ್ ಸಹಯೋಗದೊಂದಿಗೆ ಪ್ರೇರಣಾ ಸಭಾಂಗಣದಲ್ಲಿಆಯೋಜಿಸಲಾಯಿತು. ಸುಸ್ಥಿರತೆಗೆ ಒತ್ತು ನೀಡಲು ಶೈಕ್ಷಣಿಕ ಮತ್ತು ಉದ್ಯಮದ ನಾಯಕರನ್ನು ಒಟ್ಟುಗೂಡಿಸುವಲ್ಲಿ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಅಧ್ಯಾಪಕ ಸಲಹೆಗಾರ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ್ ವಿ.ಎಸ್. ಕ್ಲಬ್ ಅನ್ನು ಪರಿಚಯಿಸಿ, ಗಣ್ಯರನ್ನು ಸ್ವಾಗತಿಸಿ, ಅಧಿಕೃತ ಉದ್ಘಾಟನೆ ಹಾಗೂ ಕ್ಲಬ್ ಲಾಂಛನ ಅನಾವರಣ ಮಾಡಿದರು.
ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಮತ್ತು ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಬಾಂಬೂ ಸೊಸೈಟಿ ಆಫ್ ಇಂಡಿಯಾದ ಎನ್.ಜಿ.ಸಿ. ಸದಸ್ಯ ಮತ್ತು ಬಾಷ್ ಇಂಡಿಯಾದ ಮಾಜಿ ಹಿರಿಯ ಜನರಲ್ ಮ್ಯಾನೇಜರ್ ಕೆ.ಪಿ. ಮೂರ್ತಿ, ಪರೀಕ್ಷಾ ನಿಯಂತ್ರಕರು ಮತ್ತು ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಶಶಿಕಾಂತ ಕರಿಂಕಾ, ಎಸ್.ಎ.ಇ ಇಂಡಿಯಾ ಬೆಂಗಳೂರು ವಿಭಾಗದ ಮ್ಯಾನೇಜ್ಮೆಂಟ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಎಸ್ಜೆಇಸಿಯ ಸಹಾಯಕ ನಿರ್ದೇಶಕ ವಂ. ಫಾ. ಕೆನ್ನೆತ್ ರೇನರ್ ಕ್ರಾಸ್ಟಾ, ಡಾ. ಸುಧೀರ್ ಎಂ (ಉಸ್ತುವಾರಿ ಪ್ರಾಂಶುಪಾಲರು ಮತ್ತು ಡೀನ್ ಅಕಾಡೆಮಿಕ್ಸ್), ಮತ್ತು ಡಾ. ಪುರುಷೋತ್ತಮ ಚಿಪ್ಪರ್ (ಉಪ ಪ್ರಾಂಶುಪಾಲರು, ಡೀನ್ ಆರ್ & ಡಿ) ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಜೆಇಸಿಯ ನಿರ್ದೇಶಕ ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ವಹಿಸಿದ್ದರು.