‘ನಾನು ಆದಿ ಚುಂಚನಗಿರಿ ಮಠದಲ್ಲಿ ಬೆಳೆದ ಹುಡುಗ’: ಸಚಿವ ಜಮೀರ್ ಅಹ್ಮದ್

‘ನಾನು ಆದಿ ಚುಂಚನಗಿರಿ ಮಠದಲ್ಲಿ ಬೆಳೆದ ಹುಡುಗ’: ಸಚಿವ ಜಮೀರ್ ಅಹ್ಮದ್


ಮಂಗಳೂರು: ನಾನು ಮಠದ ಹುಡುಗ. ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಸ್ಚಾಮೀಜಿ ಬಳಿ ಕೇಳಲು ಹೇಳಿ. ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ. ಕುಮಾರಸ್ವಾಮಿ ಅವರಲ್ಲಿ ಕೇಳಿ ಎಂದು ಟಾಂಗ್ ಕೊಟ್ಟರು.

ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಎಂದು ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಮರು ನನಗೆ ಬೇಕಾಗಿಲ್ಲ ಅಂತ ಹೇಳಿದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ವೋಟ್ ಬೇಡ ಅಂತ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ, ಎಷ್ಟು ಸರಿ ಅಂತ ಕೇಳಿದ್ದು. ಮುಸ್ಲಿಂ ಪಂಚರ್ ಹಾಕುವವರು, ವೆಡ್ಡಿಂಗ್ ಮಾಡುವರು ಅಂತ ಲಘವಾಗಿ ಮಾತಾಡಿದ್ದಾರೆ. ಯಾಕೆ ಅವರ ಬಳಿ ಮತ ಕೇಳುತ್ತೀರಿ. ನಿನ್ನೆಯೂ ಕುಮಾರಸ್ವಾಮಿ ಅದೇ ಹೇಳಿದ್ದಾರೆ. ಹೌದು ಸ್ವಾಮಿ ನಾವು ಬಡವರು, ನಮ್ಮ ಬಳಿ ಯಾಕೆ ವೋಟ್ ಕೇಳುತ್ತೀರಿ? ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂಟರ್ನ್ ಕುಮಾರಸ್ವಾಮಿ ಅಂತ ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಅವರು. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು. ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ. ಒಕ್ಕಲಿಗರಿಗೆ ಯಾವ ಹೇಳಿಕೆ ನೀಡಿಲ್ಲ. ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಹಿರಿಯ ಸ್ವಾಮೀಜಿ. ನಾನು ಮಠದ ಹುಡುಗ, ಆದಿಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು ಎಂದು ತಿಳಿಸಿದರು.

ಯೋಗೇಶ್ವರ್ ಗೆಲ್ಲುತ್ತಾರೆ..:

ನನ್ನ ಅಭಿಪ್ರಾಯ ನನ್ನದು. ಡಿಕೆಶಿ ಹೇಳಿಕೆ ನಾನು ನೋಡಿಲ್ಲ. ಜಮೀರ್ ಬಂದಿದ್ದು ಪ್ಲಸ್ ಆಗಿದೆ ಸ್ವಲ್ಪ. ಹೇಳಿಕೆಯಿಂದ ಅನಾನುಕೂಲ ಆಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಏನೇನು ಆಗುವುದಿಲ್ಲ. ಚನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗೇಶ್ವರ್ 18 ರಿಂದ 20 ಸಾವಿರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಭರವಸೆ ವ್ಯಕ್ತಪಡಿಸಿದರು.

ಲೋಕಾಯುಕ್ತ ನೋಟಿಸ್ ಬಗ್ಗೆ ಮಾತನಾಡಿ, ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ರೊಟೀನ್. ಇ.ಡಿಯವರು ಎಸಿಬಿಗೆ ಫಾರ್ವಡ್ ಮಾಡಿದ್ದಾರೆ. ಅಲ್ಲಿಂದ ಲೋಕಯುಕ್ತಗೆ ಕೇಸ್ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇಬೇಕು ಎಂದು ಸ್ಪಷ್ಟಪಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article