
ಸಾಂತ್ವಾನ ಕೇಂದ್ರದಲ್ಲಿ ಸೇವೆಗೆ ಅರ್ಜಿ ಆಹ್ವಾನ
Thursday, November 7, 2024
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಗೂ ಜನ ಶಿಕ್ಷಣ ಟ್ರಸ್ಟ್ನ ಸಹಭಾಗಿತ್ವದಲ್ಲಿ ಪುತ್ತೂರು ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಸಾಂತ್ವಾನ ಕೇಂದ್ರದಲ್ಲಿ ತೆರವಾಗಿರುವ ಸಮಾಜ ಕಾರ್ಯಕರ್ತರ ಹುದ್ದೆಗೆ ಸೇವಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಮಾಜ ಕಾರ್ಯ ಅಥವಾ ಮನಶಾಸ್ತ್ರದಲ್ಲಿ ಪದವಿ ವಿದ್ಯಾರ್ಹತೆ ಹೊಂದಿದ್ದು 22 ರಿಂದ 35 ವರ್ಷದೊಳಗಿನ ಕಂಪ್ಯೂಟರ್ ಜ್ಞಾನ ಹೊಂದಿರುವ ಗೌರವ ಧನದ ಆಧಾರದಲ್ಲಿ ಕೆಲಸ ಮಾಡಲು ಇಚ್ಚಿಸುವ ಸೇವಾಸಕ್ತ ಮತ್ತು ಕ್ಷೇತ್ರ ಅನುಭವ ಹೊಂದಿರುವ ಪುತ್ತೂರು ತಾಲೂಕು ವ್ಯಾಪ್ತಿಯೊಳಗಿನ ಮಹಿಳಾ ಅಭ್ಯರ್ಥಿಗಳು ನ.20 ರ ಒಳಗೆ ನಿರ್ಧಿಷ್ಠ ಅರ್ಜಿ ನಮೂನೆಯನ್ನು ಸಾಂತ್ವಾನ ಕೇಂದ್ರದಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಜನ ಶಿಕ್ಷಣ ಟ್ರಸ್ಟ್ ಸಾಂತ್ವಾನ ಕೇಂದ್ರ, ಸ್ತ್ರೀ ಶಕ್ತಿ ಭವನ, ದರ್ಬೆ, ಪತ್ತೂರು ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿಗಾಗಿ ದೂರವಾಣಿ ಸಂಖ್ಯೆ 08251-231988, 9449642137 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.