
ಸೂಟರ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಬಲೀಂದ್ರ ಪೂಜೆ
ಮಂಗಳೂರು: ವಿಶಿಷ್ಟ ಹಾಗೂ ಅತ್ಯಂತ ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಬಲೀಂದ್ರ ಪೂಜೆಯನ್ನು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶನಿವಾರ ಆಚರಿಸಲಾಯಿತು.
ಅಂಧಕಾರವನ್ನು ಕಳೆಯುವ ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವೂ ಕೂಡ ವಿಶಿಷ್ಟತೆಯನ್ನು ಪಡೆದಂತಹ ದಿನ. ಪ್ರಜಾಹಿತ ರಾಜನಾಗಿ, ದಾನಶೂರನೆಂದು ಪ್ರಖ್ಯಾತಿ ಪಡೆದ ಬಲೀಂದ್ರನ ಪೂಜೆಯನ್ನು ದೈವಸ್ದಾನಗಳಲ್ಲಿ ದೀಪಾವಳಿ ಹಬ್ಬದಂದು ಆಚರಿಸಲಾಗುತ್ತದೆ. ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಬಲೀಂದ್ರ ಪೂಜೆಯನ್ನು ಆಚರಿಸಲಾಯಿತು.
ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಅವರು ಬಲೀಂದ್ರ ಪೂಜೆಯ ಮಹತ್ವವನ್ನು ವಿವರಿಸಿದರು. ಶ್ರೀಹರಿಯು ವಾಮನ ವಟುವಾಗಿ ಬಂದು ಯಾಗ ನಿರತನಾದ ಬಲಿ ಚಕ್ರವರ್ತಿಯಲ್ಲಿ ಮೂರು ಪಾದಗಳಷ್ಟು ಭೂ ದಾನ ಬೇಡುತ್ತಾರೆ. ಬಲಿ ಇದಕ್ಕೆ ಒಪ್ಪಿಕೊಂಡಾಗ ತನ್ನ ಮೊದಲೆರಡು ಪಾದಗಳನ್ನು ಭೂಮಿ ಹಾಗೂ ಆಕಾಶಕ್ಕೆ ಇಟ್ಟು ಆಕ್ರಮಿಸಿದ ವಾಮನ ವಟು ಮೂರನೇ ಪಾದಕ್ಕೆ ಸ್ಥಾನವೆಲ್ಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಯ ಮೇಲಿಡಲು ಪ್ರಾರ್ಥಿಸಿಕೊಂಡಾಗ ವಾಮನ ಅವತಾರ ಶ್ರೀಹರಿಯು ಆತನನ್ನು ಪಾತಾಳಕ್ಕೆ ತುಳಿಯುತ್ತಾರೆ.
ಹೀಗೆ ಬಲಿ ಚಕ್ರವರ್ತಿ ಸತ್ಕಾರ್ಯ, ದಾನ-ಧರ್ಮ, ಯಾಗ-ಯಜ್ಞಗಳಿಂದಲೂ ಗಮನ ಸೆಳೆಯುತ್ತಾನೆ. ದಾನಶೂರ ಬಲಿ ಚಕ್ರವರ್ತಿ ವಾಮನನಾದ ಶ್ರೀಹರಿಯ ಕೃಪೆಗೆ ಪಾತ್ರನಾಗುತ್ತಾನೆ. ಆದರೆ ವಾಮನನಾಗಿ ಬಂದ ದೇವರು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ಅನುಗ್ರಹಿಸುವ ಸಂಗತಿ ಮಾತ್ರ ಬಲಿಯ ನೈತಿಕತೆ-ಶ್ರೇಷ್ಠತೆಯನ್ನಾಗಿ ಜನಪದರು ದೀಪಾವಳಿಯಂದು ಸ್ತುತಿಸುತ್ತಾರೆ.
ದೈವಸ್ಥಾನದ ಗೌರವ ಸಲಹೆಗಾರರಾದ ಕೆ. ಪಾಂಡುರಂಗ, ಎಸ್. ಬಾಬು, ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ನವೀನ್, ಪ್ರಧಾನ ಅರ್ಚಕರಾದ ಎಸ್. ಗಣೇಶ, ಪದಾಧಿಕಾರಿಗಳಾದ ಎಸ್. ಮೋಹನ್, ಬಿ. ವಿಶ್ವನಾಥ್ ಸಾಲ್ಯಾನ್, ಎಸ್. ಜನಾರ್ಧನ, ಬಿ. ಗಣೇಶ್, ಎಸ್. ವಸಂತ, ಎಸ್. ಸುರೇಶ್, ಎಸ್. ಉಪೇಂದ್ರ, ಎಸ್. ಪ್ರವೀಣ್, ರಂಜಿತ್, ಭೋಜ, ಅನ್ನಪೂರ್ಣ ರಘುರಾಮ್, ಉಮಾಪ್ರಸಾದ್, ಪುರುಷೋತ್ತಮ ಪದಕಣ್ಣಾಯ, ಸುನಿಲ್ ರಾಜ್ ಪದಕಣ್ಣಾಯ, ಕಿರಣ್ ರಾಜ್ ಪದಕಣ್ಣಾಯ, ಅಪ್ಪಿ ಎಸ್., ಸುದೇಶ್ ಕುಮಾರ್, ತಿಲಕ್ ರಾಜ್, ರಾಹುಲ್ ಎಸ್., ಸಂತೋಷಕುಮಾರ್, ಸಂದೀಪ್, ಕಿಶೋರ್, ರಕ್ಷಿತ್, ಇಂದಿರಾ ಮೋಹನ್ ದಾಸ್, ಪ್ರಶಾಂತ್ ಪಿ.ಎಸ್., ಪ್ರವೀಣ್ ಪಿ.ಎಸ್,, ಪ್ರಥ್ವೀಶ್ ಪಿ.ಎಸ್., ಸೂರಜ್ ಸಾಗರ್, ಪ್ರದೀಪ್, ರಕ್ಷಿತ್ ಬಿ.ಎಸ್,, ದೀಕ್ಷಿತ್ ಬಿ.ಎಸ್., ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.