
ಕೌಶಲ ತರಭೇತಿ ಕೇಂದ್ರದಲ್ಲಿ ಪರಿಸರಸ್ನೇಹಿ ಸೌಹಾರ್ಧ ದೀಪಾವಳಿ
ಮುಡಿಪು: ಸಮಾಜ ಕಾರ್ಯ ಸಂಸ್ಥೆ ಜನ ಶಿಕ್ಷಣ ಟ್ರಸ್ಟ್‌ನ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ ಪರಿಸರ ಸ್ನೇಹಿ ಸೌಹಾರ್ಧ ದೀಪಾವಳಿಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು.
ಉಳ್ಳಾಲ, ಬಂಟ್ವಾಳ, ಕಾಸರಗೋಡು ತಾಲೂಕು ವ್ಯಾಪ್ತಿಯ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ತರಭೇತಿ ನೀಡುತ್ತಿರುವ ಕೇಂದ್ರದಲ್ಲಿ ಪಟಾಕಿ ಸದ್ದಿನ, ಚಪ್ಪಾಳೆ ಪಟಾಕಿ/ ಚಪ್ಪಾಳೆ ಮಾಲೆ ಪಟಾಕಿ ಹಾಕುತ್ತಾ ಕುಷಿ ಪಡುವ ಕುಷಿ ಕೊಡುವ ಚಟುವಟಿಕೆಗಳನ್ನು ನಡೆಸಿ ಕಸಾಸುರನನ್ನು ಸೋಲಿಸಿ ಬಯಲು ಕಸಾಲಯಗಳನ್ನು ಅಳಿಸಲು ಮೂಲದಲ್ಲೆ ಕಸ ವಿಂಗಡಿಸಿ ಸಮರ್ಪಕವಾಗಿ ನರ್ವಹಿಸಿ ಸ್ವಚ್ಛತೆ ಸಾಧಿಸಿ ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರಗಳನ್ನು ಗ್ರಾ.ಪಂ.ಗೆ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ತರಬೇತಿ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ಸ್ವರ್ಗದ ಸಸಿ ಎಂದೇ ಹೇಳಲಾಗುವ ಲಕ್ಷ್ಮಿತರು ಔಷಧಿ ಸಸಿಗಳನ್ನು ವಿತರಿಸಲಾಯಿತು. ಮನೆಯಲ್ಲೇ ತಯಾರಿಸಿದ ಸಿಹಿ ತಂಡಿಯನ್ನು ಹಂಚಿ ತಿನ್ನಾಯಿತು. ಬೆಳಕಿನ ಹಬ್ಬ ದೀಪಾವಳಿಯನ್ನು ಅಂತರಂಗ ಬಹಿರಂಗ ಶುಧ್ದತೆಯಿಂದ ಸಾಮೂಹಿಕ ವಾಗಿ ಆಚರಿಸಿದಾಗ ಸರ್ವರ ಬದುಕಿಗೆ ಹೊಸಬೆಳಕು ನೀಡುವುದೆಂದು ನರೇಗಾಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ತಿಳಿಸಿದರು.
ದೀಪಾವಳಿ ಹಬ್ಬದ ಮಹತ್ಚದ ಬಗ್ಗೆ ತರೇತುದಾರರಾದ ಜನನಿ, ಪ್ರಜ್ನಾ ಕಾವೇರಿ ಮತ್ತು ವಿದ್ಯಾರ್ಥಿನಿಯರು ಅಭಿಪ್ರಾಯಗಳನ್ನು ಹಂಚಿಕೊಂಡರು.