
ಶಕ್ತಿ ವಿದ್ಯಾಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳಿಂದ ಅದ್ದೂರಿಯ ದೀಪಾವಳಿ ಆಚರಣೆ
ಮಂಗಳೂರು: ಶಕ್ತಿನಗರ ಶಕ್ತಿ ವಿದ್ಯಾ ಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಕ್ತಿ ಆಡಳಿತ ಮಂಡಳಿ ಮತ್ತು ವಸತಿನಿಲಯದ ನಿಲಯ ಪಾಲಕರ ಜೊತೆಗೂಡಿ ಅದ್ದೂರಿಯ ದೀಪಾವಳಿಯನ್ನು ಆಚರಿಸಲಾಯಿತು.
ಮೊದಲನೇಯ ದಿನ ಪ್ರಾತಃ ಕಾಲದಲ್ಲಿ ಎಣ್ಣೆ ಸ್ನಾನ ನಂತರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮತ್ತು ಪೂಜೆಯಲ್ಲಿ ಪಾಲ್ಗೊಂಡರು. ನಂತರ ಎರಡನೇ ದಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪಾವಳಿಯ ನಿಮಿತ್ತದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಮೂರನೇ ದಿನ ಸುಮಾರು 2.30 ಗಂಟೆಗಳ ನಿರಂತರ ದೇಶವನ್ನು ಬಿಂಬಿಸುವ ವಿವಿಧ ರಾಜ್ಯಗಳ ವಿಶೇಷತೆಯನ್ನು ಸಾದರ ಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಂಜೆ ವಿಶೇಷವಾದ ಭಜನೆಯಲ್ಲಿ ಸಂಸ್ಥೆಯ 600 ವಿದ್ಯಾರ್ಥಿಗಳು ಭಾಗವಹಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ಸುತ್ತಲೂ ಸುಮಾರು 1500 ದೀಪವನ್ನು ಹಚ್ಚಿದರು. ಶಾಲಾ ಮೈದಾನದಲ್ಲಿ ಕುಣಿತಾ ಭಜನೆಯ ಮೂಲಕ ಪಟಾಕಿ ಸಿಡಿಸಿ ಅದ್ದೂರಿ ದೀಪಾವಳಿಯ ಆಚರಣೆ ನಡೆಯಿತು. ಈ ಕಾರ್ಯಕ್ರಮ ಎಲ್ಲವೂ ಭಾರತೀಯ ಉಡುಗೆ ತೊಡುಗೆಯಿಂದ ಕೂಡಿದ್ದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ತಮ್ಮ ಮನೆಯ ವಾತಾವರಣವನ್ನು ಈ ಸಂದರ್ಭದಲ್ಲಿ ಮಕ್ಕಳು ಆನಂದಿಸಿದರು.
ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಶಕ್ತಿ ವಿದ್ಯಾರ್ಥಿ ವಸತಿ ನಿಲಯದ ಪ್ರಧಾನ ನಿಲಯಪಾಲಕರಾದ ಮಧುಸೂದನ್ ಮತ್ತು ವಿಶಾಖ ಅವರ ಉಪಸ್ಥಿತಿಯೊಂದಿಗೆ ನೆರವೇರಿತು.