ಜವನೆರ್ ಬೆದ್ರದಿಂದ ದೀಪಾವಳಿ ಸಂಭ್ರಮ ಆಚರಣೆ

ಜವನೆರ್ ಬೆದ್ರದಿಂದ ದೀಪಾವಳಿ ಸಂಭ್ರಮ ಆಚರಣೆ


ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್‌ನ 7ನೇ ವರ್ಷದ ದೀಪಾವಳಿ ಸಂಭ್ರಮ ಹಾಗೂ ಗೂಡುದೀಪ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಹಾಗೂ ಯೋಧ ನಮನ ಕಾರ್ಯಕ್ರಮವು ಇಲ್ಲಿನ ಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ಭಾನುವಾರ ನಡೆಯಿತು.

ಉದ್ಯಮಿ, ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿಯು ವಿಜಯ, ಸಾಮರಸ್ಯದ ಸಂಕೇತ.  ಅಲ್ಲದೆ ಮಹಾವಿಷ್ಣು, ರಾಮ, ಕೃಷ್ಣರಿಗೂ ಈ ದೀಪಾವಳಿ ಆಚರಣೆಗೂ ವಿಶೇಷವಾದ ಸಂಬಂಧವಿದೆ. ಜವನೆರ್ ಬೆದ್ರ ಸಂಘಟನೆಯು ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ, ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಜವನೆರ್ ಬೆದ್ರ ಸಂಘಟನೆಯು ಸ್ವಚ್ಛತೆ, ಗಿಡಗಳನ್ನು ಬೆಳೆಸುವ ಮತ್ತು ರಕ್ತದಾನದ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದರು.

ಸನ್ಮಾನ:

ಕುಣಿತ ಭಜನೆ ಮಾಡಿಕೊಂಡು ಶ್ರೀಕೃಷ್ಣ ವೇಷದಲ್ಲಿ ಭಾಗವಹಿಸಿದ್ದ ಪುಟಾಣಿ ವರ್ಷ ಕೆ. ಅವರನ್ನು ಹಾಗೂ ಯೋಧ ನಮನ ಕಾರ್ಯಕ್ರಮಕ್ಕೆ ನಿಯುಕ್ತರಾಗಿದ್ದ ಮಾರೂರು ಸಂದೀಪ್ ಎಂ ಶೆಟ್ಟಿ ಅವರು ಕರ್ತವ್ಯ ನಿರತರಾಗಿದ್ದ ಕಾರಣ ಅವರ ಪರವಾಗಿ ಅವರ ತಂದೆ ತಾಯಿ ರಾಜೇಶ್ ಶೆಟ್ಟಿ ಹಾಗೂ ರತಿ ದಂಪತಿಯನ್ನು ಸನ್ಮಾನಿಸಲಾಯಿತು.

ಗೌರವ:

ದಸ್ಕತ್ ಸಿನಿಮಾದ ವಿಶ್ವನಾಥ, ನಟ ದೀಕ್ಷಿತ್ ಅನ್ಡಿಂಜೆ, ಧಾರ್ಮಿಕ ಪಾರಂಪರಿಕ ತಿಂಡಿ ತಿನಿಸು ರಚಿಸಿ ಯೂಟ್ಯೂಬ್‌ನಲ್ಲಿ ಹೆಸರುವಾಸಿಯಾದ ವಿನಯ ಡಿ. ಕಿಣಿ, ಇನ್ಸ್ಟಾಗ್ರಾಮ್‌ನ ಖ್ಯಾತ ಸೂರಜ್ ಅಂಚನ್ ಗೌರವಿಸಲಾಯಿತು.

ಹಿರಿಯ ವಕೀಲ ಕೆ.ಆರ್. ಪಂಡಿತ್, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯ ಶರತ್ ಶೆಟ್ಟಿ, ಗೋಪಾಲಕೃಷ್ಣ ದೇವಾಲಯದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಆದಿ ಕಲ್ಚರ್ ಅಕಾಡೆಮಿಯ ಸುಮನಾ ಪ್ರಸಾದ್ ತಂಡದವರ ಭಕ್ತಿ ಗಾನ ಸಿಂಚನ ಕಾರ್ಯಕ್ರಮ ನಡೆಯಿತು. ಜವನೆರ್ ಬೆದ್ರ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಸ್ವಾಗತಿಸಿ, ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. 

ರಂಗೋಲಿ ಸ್ಪರ್ಧಾ ವಿಜೇತರ ವಿವರ:

*ರಕ್ಷಿತಾ ಅಂಚನ್ ಮಾರ್ನಾಡು (ಪ್ರಥಮ), ಶ್ರಾವ್ಯ ಪುತ್ತಿಗೆ (ದ್ವಿತೀಯ) ಹಾಗೂ ಪ್ರೇರಣಾ ಶೆಟ್ಟಿ (ತೃತೀಯ).

ಗೂಡು ದೀಪ ಸ್ಪರ್ಧೆ, ಆಧುನಿಕ ವಿಭಾಗ ವಿಜೇತರು:

ಮಂಗಳೂರು ಅಶೋಕನಗರದ ವಿಠ್ಠಲ್ ಭಟ್ (ಪ್ರಥಮ), ಜಗದೀಶ್ ಅಮೀನ್ ಸುಂಕದಕಟ್ಟೆ, (ದ್ವಿತೀಯ), ಪೂಜಾ ಮಾರ್ನಾಡು ತೃತೀಯ. 

ಸಾಂಪ್ರದಾಯಿಕ ವಿಭಾಗದಲ್ಲಿ: ಸತೀಶ್ ಬೆಟ್ಕೇರಿ (ಪ್ರಥಮ), ಐಶ್ವರ್ಯ ಕಾಮತ್ ಒಂಟಿ ಕಟ್ಟೆ (ದ್ವಿತೀಯ), ರೀತೇಶ್ ತೃತೀಯ ಬಹುಮಾನ ಪಡೆದುಕೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article