ಕಾಶಿಪಟ್ಣದಲ್ಲಿ ಸೌಹಾರ್ದ ಸ್ನೇಹ ಸಂಗಮ

ಕಾಶಿಪಟ್ಣದಲ್ಲಿ ಸೌಹಾರ್ದ ಸ್ನೇಹ ಸಂಗಮ

ಧರ್ಮದ ಸಾರವನ್ನು ಅರಿತುಕೊಳ್ಳಿ: ಡಾ.ಮೋಹನ ಆಳ್ವ


ಮೂಡುಬಿದಿರೆ: ನಮ್ಮ ಪೂರ್ವಜರು ನಮಗೆಲ್ಲಾ ಒಂದೊಂದು ಧರ್ಮ, ಜಾತಿ ಎಂದು ತೋರಿಸಿಕೊಟ್ಟಿದ್ದಾರೆ, ಅವರೆಂದೂ ಪರಸ್ಪರ ಧ್ವೇಷದ ಸಾರ ಹೇಳಿಕೊಟ್ಟಿಲ್ಲ, ಸೌಹಾರ್ದ ಬದುಕಿನ ಹಾದಿಯನ್ನೇ ತೋರಿಸಿಕೊಟ್ಟವರು, ಅವರು ತೋರಿದ ಹಾದಿಯಲ್ಲೇ ನಾವೆಲ್ಲಾ ಮುಂದುವರಿದು ನಮ್ಮ ನಮ್ಮ ಧರ್ಮದ ಸಾರವನ್ನು ಅರಿತುಕೊಂಡು ಸೌಹಾರ್ದ ಜೀವನ ನಡೆಸಬೇಕೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಹೇಳಿದರು.

ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡಿದ್ದ ಸೌಹಾರ್ದ ಸ್ನೇಹ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಶಯ ಮತ್ತು ಪ್ರೀತಿ ಒಟ್ಟಿಗಿರಲು ಸಾಧ್ಯವಿಲ್ಲ, ಎಲ್ಲಿ ಸಂಶಯ ಇರುತ್ತದೋ ಅಲ್ಲಿ ಪ್ರೀತಿ ಇರಲ್ಲ, ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸಂಶಯ ಇರಲ್ಲ, ಯಾರೂ ಪರಸ್ಪರ ಸಂಶಯದಿಂದ ಜೀವಿಸದೆ ಪ್ರೀತಿಯಿಂದ ಜೀವಿಸಬೇಕು, ಧರ್ಮ ಮತ್ತು ಸಮಾಜವನ್ನು ಅರ್ಥ ಮಾಡಿಕೊಂಡು ಜೀವಿಸಬೇಕೆಂದವರು ಹೇಳಿದರು.

ಇದೇ ಸಂದರ್ಭದಲ್ಲಿ ದಾರುನ್ನೂರ್ ವಿದ್ಯಾ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಹಿರಿಯರಾದ ಪಿ.ಕೆ. ರಾಜು ಪೂಜಾರಿ, ಕಾಶಿಪಟ್ಣ ಪಂಚಾಯತ್ ಅಧ್ಯಕ್ಷ ಸತೀಶ್ ಕೆ, ಪ್ರವೀಣ್ ಪಿಂಟೊ, ಅನೀಸ್ ಕೌಸರಿ, ತನ್ಝೀಮ್ ಸಂಸ್ಥೆಯ ಮುಖ್ಯಸ್ಥ ಇನಾಯತ್ ಆಲಿ, ಮಂಗಳೂರು ಮಾಜಿ ಮೇಯರ್ ಕೆ. ಅಶ್ರಫ್, ಅಬ್ದುಲ್ ರಶೀದ್ ಹಾಜಿ, ಜಾವೆದ್ ಯೆನಪೋಯ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ, ಹನೀಫ್ ಹಾಜಿ, ಸಮದ್ ಹಾಜಿ, ಇಬ್ರಾಹಿಂ ಕೋಡಿಜಾಲ್, ಅದ್ದು ಹಾಜಿ, ಶರೀಫ್ ಹಾಜಿ ವೈಟ್ ಸ್ಟೋನ್, ಫಕೀರಬ್ಬ ಮಾಸ್ಟರ್, ಡಿ.ಎ. ಉಸ್ಮಾನ್ ಹಾಜಿ, ಅಬ್ದುಸ್ಸಲಾಮ್ ಬೂಟ್ ಬಝಾರ್, ಅಬೂಬಕ್ಕರ್ ಮರೋಡಿ, ಹೆಚ್. ಮುಹಮ್ಮದ್ ವೇಣೂರು, ಅಮೀನ್ ಹುದವಿ, ಹುಸೈನ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article