
ವಿಪತ್ತು ನಿರ್ವಹಣೆ ಯೋಜನೆ: ಅಮೆರಿಕಾ ತಂಡದಿಂದ ಭೇಟಿ
Monday, November 25, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಯುಎಸ್ ಕಾನ್ಸುಲೇಟ್ ಜನರಲ್ ಚೆನೈ ಇದರ ಅಮೆರಿಕನ್ ಸಿಟಿಜನ್ ಸರ್ವಿಸಸ್ ಅಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಅಮೆರಿಕನ್ ಸಿಟಿಜನ್ ಸರ್ವಿಸ್ ಕಾನ್ಸೂಲ್ ಕಾರ್ಲಟನ್ ಬೆನ್‌ಸನ್ ಅವರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯ ಬಗ್ಗೆ ವಿವರ ನೀಡಿದರು.
ವಿಪತ್ತು ಹಾಗೂ ಇತರ ಸಮಸ್ಯೆಗಳ ನಿರ್ವಹಣೆ ಬಗ್ಗೆ ಯೋಜನೆ ರೂಪಿಸಿ ನಾಗರಿಕರನ್ನು ಅವುಗಳನ್ನು ಎದುರಿಸುವ ಬಗ್ಗೆ ಯೋಜನೆ ರೂಪಿಸುವುದು ಯು.ಎಸ್. ಕಾನ್ಸುಲರ್ ಜನರಲ್‌ನ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣೆ ಯೋಜನೆಗಳ ಬಗ್ಗೆ ಅಧ್ಯಯನ ಮಾಡುವುದು ಈ ಭೇಟಿಯ ಉದ್ದೇಶವಾಗಿದೆ.
ಕಾನ್ಸುಲೇಟ್ ಜನರಲ್ ಸಹಾಯಕಿ ಚಂದ್ರಲೇಖಾ, ಜಿಲ್ಲಾ ವಿಪತ್ತು ನಿರ್ವಹಣೆ ಯೋಜನಾಧಿಕಾರಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.