ಸರಗಳ್ಳನ ಬಂಧನ: ಚಿನ್ನದ ಸರ ವಶಕ್ಕೆ

ಸರಗಳ್ಳನ ಬಂಧನ: ಚಿನ್ನದ ಸರ ವಶಕ್ಕೆ


ಮೂಡುಬಿದಿರೆ: ಚಿನ್ನದ ಸರವನ್ನು ಪಡೆದು ವಂಚಿಸಿದ್ದ ಆರೋಪಿಯನ್ನು ಮೂಡುಬಿದರೆ ಪೊಲೀಸರು ಬಂಧಿಸಿದ್ದು, ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳದ ನಿವಾಸಿ ಸುರೇಶ್ ಯಾನೆ ಸಂತೋಷ (60) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ ಸುಮಾರು ಎರಡುವರೇ ಪವನ್ ತೂಕದ ಚಿನ್ನದ ಸರ ಮತ್ತು ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದು, ಒಟ್ಟು 36 ಗ್ರಾಂ. ತೂಕದ 2 ಚಿನ್ನದ ಸರಗಳ ಅಂದಾಜು 2,50,000 ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರದ ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.5 ರಂದು ಸುಂದರಿ ಪೂಜಾರಿ (73) ಅವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದಿರೆಯ ಬಸ್ ಸ್ಯಾಂಡ್‌ಗೆ ಬಂದು ಇಳಿದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ಅವರ ಬಳಿಗೆ ಬಂದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ನೋಡಿ, ಪರಿಚಿತನಂತೆ ವರ್ತಿಸಿ ಇದೇ ರೀತಿಯ ಚಿನ್ನದ ಸರವನ್ನು ಮಾಡಿಸಬೇಕಿದೆ ಎಂದು ನಂಬಿಸಿ ಅವರಲ್ಲಿದ್ದ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದು, ವಾಪಸು ನೀಡದೇ ಮೋಸ ಮಾಡಿರುವ ಬಗ್ಗೆ ಮೂಡಬಿಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ವಿರುದ್ಧ ದ.ಕ ಜಿಲ್ಲೆಯ ಪುತ್ತೂರು ಟೌನ್ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ, ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿದ್ದಾರೆ.

ಪತ್ತೆ ಕಾರ್ಯಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಶ್ರೀಕಾಂತ್ ಕೆ. ಅವರ ನಿರ್ದೇಶನದಂತೆ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರ ನೇತೃತ್ವದ ತಂಡ ಕೃಷ್ಣಪ್ಪ, ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article