ಪೊಲೀಸ್ ಆಯುಕ್ತರ ವಿರುದ್ಧ ದೂರು

ಪೊಲೀಸ್ ಆಯುಕ್ತರ ವಿರುದ್ಧ ದೂರು

ಮಂಗಳೂರು: ರಸ್ತೆ ದುರವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ವಿರುದ್ಧ ಎಫ್‌ಐಆರ್ ಹಾಕಿರುವುದನ್ನು ವಿರೋಧಿಸಿ ಮಾಜಿ ಸಚಿವ ರಮಾನಾಥ ರೈ ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದಾರೆ. ಬುಧವಾರ ಬೆಂಗಳೂರಿಗೆ ತೆರಳಿದ್ದ ಅವರು ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.

ಕಮ್ಯುನಿಸ್ಟ್ ಸಂಘಟನೆಯವರು ಕರಾವಳಿಯಲ್ಲಿ ನಮ್ಮ ಪರವಾಗಿರುವವರು. ಜನಪರ ವಿಚಾರದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಮೇಲೆ ಪದೇ ಪದೇ ಎಫ್‌ಐಆರ್ ಹಾಕುವುದು ಸರಿಯಲ್ಲ. ನಮ್ಮ ಮಾತನ್ನು ಕೇಳದ ಕಮಿಷನರ್ ನಮಗೆ ಬೇಡ, ಅವರನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ.

ಈ ವಿಷಯದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಖಾದರ್, ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ ಮಾಡುವುದು ತಪ್ಪು. ಪೊಲೀಸರು ಅನುಮತಿ ನಿರಾಕರಿಸಿದ್ದರೆ ಏನಾದರೂ ಕಾರಣ ಇರಬೇಕಲ್ವಾ.. ಅನುಮತಿ ನಿರಾಕರಿಸಿದ್ದು ಯಾಕೆಂದು ಅವರಲ್ಲಿಯೇ ಲಿಖಿತವಾಗಿ ಕೇಳಬೇಕಿತ್ತು. ಅಥವಾ ಐಜಿಪಿ ಅದಕ್ಕಿಂತ ಮೇಲಿನವರಿಂದ ಅನುಮತಿ ಪಡೆಯಲೂ ಬಹುದಿತ್ತು. ಅದು ಬಿಟ್ಟು ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡುವುದು ಸರಿಯಾ.. ಇದಕ್ಕಾಗಿ ಕೇಸು ಹಾಕಿದ್ದಾರೆ. ಕಾನೂನು ಉಲ್ಲಂಘಿಸಿದರೆ ಕೇಸು ಹಾಕೋದು ಫಾರ್ಮಾಲಿಟಿ. ಸಮಾಜದಲ್ಲಿ ಶಾಂತಿ, ಸೌಹಾರ್ದ ಇರಬೇಕಿದ್ದರೆ ಕಾನೂನು, ಪೊಲೀಸ್ ವ್ಯವಸ್ಥೆ ಬೇಕಲ್ವಾ ಎಂದು ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article