ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತರ್ ಕಾಲೇಜು ವಾಣಿಜ್ಯ ಹಬ್ಬ "ಅಶ್ವಮೇಧ"

ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತರ್ ಕಾಲೇಜು ವಾಣಿಜ್ಯ ಹಬ್ಬ "ಅಶ್ವಮೇಧ"


ಮೂಡುಬಿದಿರೆ: ನಾವು ಯಾವುದೇ ಕೆಲಸವನ್ನು  ಮಾಡಲು ಹೊರಡುವಾಗ ನಮ್ಮಲ್ಲಿ ನಿಖರವಾದ ಗುರಿ ಮತ್ತು ಕಠಿಣ ಪರಿಶ್ರಮವಿದ್ದರೆ  ಯಶಸ್ವಿಯನ್ನು ಹೊಂದಲು ಸಾಧ್ಯ ಎಂದು ಉದ್ಯಮಿ, ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ಜೆ.ಕೋಟ್ಯಾನ್ ಹೇಳಿದರು.

ಅವರು ಶ್ರೀ ಮಹಾವೀರ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಬುಧವಾರ ನಡೆದ ಅಂತರ್ ಕಾಲೇಜು ವಾಣಿಜ್ಯ ಹಬ್ಬ "ಅಶ್ವಮೇಧ" ವನ್ನು ಉದ್ಘಾಟಿಸಿ ಮಾತನಾಡಿದರು.

ತಾನು ಈ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ನಂತರ ಮುಂಬೈಯಲ್ಲಿ ಪದವಿ ಶಿಕ್ಷಣ ಶಿಕ್ಷಣ ಮುಗಿಸಿ ಜವುಳಿ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವುದಾಗಿ ತಿಳಿಸಿದರು. 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ ಗಳ ಹುಟ್ಟೂರಾಗಿರುವ ದ.ಕ ಜಿಲ್ಲೆಯಲ್ಲಿ ಇದೀಗ ಬ್ಯಾಂಕ್ ಗಳು ಇನ್ನೊಂದು ಬ್ಯಾಂಕಿನ ಜತೆ ಮರ್ಜಿ ಆಗಿರುವುದರಿಂದ ಅಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದ್ದು ಇಂಗ್ಲೀಷ್,  ಹಿಂದಿ ಮಾತನಾಡುವವರೆ ತುಂಬಿಕೊಂಡಿದ್ದು ಹಳ್ಳಿಯ ಜನರಿಗೆ ವ್ಯವಹಾರ ನಡೆಸಲು ಕಷ್ಟ ಸಾಧ್ಯವಾಗುತ್ತಿದೆ ಇದಕ್ಕೆ ಕಾರಣ ಇಂದು ವಾಣಿಜ್ಯ ವಿಭಾಗಕ್ಕೆ ಹೋಗುವ ವಿದ್ಯಾರ್ಥಿ ಸಂಖ್ಯೆ ಕಡಿಮೆಯಾಗಿರುವುದು ಆದ್ದರಿಂದ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು ಬ್ಯಾಂಕಿಂಗ್ ಕ್ಷೇತ್ರದತ್ತ ಗಮನ ಹರಿಸಿ, ತರಬೇತಿಗಳನ್ನು ಪಡೆದುಕೊಂಡು ಪರೀಕ್ಷೆಗಳನ್ನು ಬರೆಯಿರಿ ಎಂದು ಸಲಹೆ ನೀಡಿದರು.

ಇನ್ನೋರ್ವ ಹಳೆ ವಿದ್ಯಾರ್ಥಿ ಸೂರ್ಯಕಾಂತ್ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ, ಕಾರ್ಯಕ್ರಮದ ಸಂಚಾಲಕ  ಪ್ರೊ.ಹರೀಶ್, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಅಧ್ಯಕ್ಷೆ ಶೃತಿ ಎಸ್. ಪೆರಿ, ವಾಣಿಜ್ಯ ವಿಭಾಗದ ಸಂಯೋಜಕಿ ಶೃತಿ ಎಸ್.ಡಾಂಗೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ವಿಸ್ಮಯ ಸ್ವಾಗತಿಸಿದರು. ಆಶಿಕಾ ಅತಿಥಿಗಳನ್ನು ಪರಿಚಯಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿಲೇಶ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article