ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳಾದ ರಿಶಾಂತ್ ಮತ್ತು ನಿಖಿತಾ ಅವರಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರಿನಲ್ಲಿ ರಸ್ತೆ ಸುರಕ್ಷತೆಯ ಕುರಿತು ಪಿ.ಆರ್. ಚಟುವಟಿಕೆಯನ್ನು ನಡೆಸಲಾಯಿತು.
ಮಕ್ಕಳು ತಮ್ಮ ಆರಂಭಿಕ ವರ್ಷದ ಶಾಲಾ ದಿನಗಳಲ್ಲಿ ರಸ್ತೆ ದಾಟುವಾಗ ಗಣನೀಯ ಅಪಾಯವನ್ನು ಹೊಂದಿರುವ ಸಾಧ್ಯತೆಗಳಿದ್ದು. ಕೆಲವು ಮಕ್ಕಳಿಗೆ ಸಿಗ್ನಲ್ ಗಳು ಮತ್ತು ಜೀಬ್ರಾ ಕ್ರಾಸಿಂಗ್ ಗಳ ಬಗ್ಗೆ ಅರಿವಿದ್ದರೂ, ಟ್ರಾಫಿಕ್ ಇರುವಿಕೆಯನ್ನು ಪತ್ತೆಹಚ್ಚುವುದು ಅಥವಾ ವಾಹನಗಳ ವೇಗ ಮತ್ತು ದೂರವನ್ನು ನಿರ್ಣಯಿಸುವುದು, ರಸ್ತೆ ದಾಟಲು ಸೂಕ್ತ ಸಮಯವನ್ನು ನಿರ್ಣಯಿಸುವುದು ಮಕ್ಕಳಿಗೆ ತಿಳಿದಿರುವುದಿಲ್ಲ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 9 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಒಟ್ಟು 113 ವಿದ್ಯಾರ್ಥಿಗಳಿದ್ದು, ಪಿ.ಪಿ.ಟಿ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ, ರಸ್ತೆ ನಿಯಮಗಳ ಬಗ್ಗೆ ಅರಿವು, ಟ್ರಾಫಿಕ್ ಸಿಗ್ನಲ್ ಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಸ್ವಾತಿ, ಪ್ರಗತಿ, ದಿಶಾ ಮತ್ತು ಚಂದನ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರಿನ ಮುಖ್ಯೋಪಾಧ್ಯಾಯ ನಾಗೇಶ್ ಮತ್ತು ಸಹ ಶಿಕ್ಷಕರು ಜತೆಗಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ಕುಮಾರಿ ಹಾಗೂ ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮ ಸಂಯೋಜಿಸಿದರು.


