
ಬನ್ನಡ್ಕದಲ್ಲಿ ದ್ವಿಚಕ್ರ ವಾಹನ ನಡುವೆ ಢಿಕ್ಕಿ: ಗಾಯಾಳು ಸವಾರ ಮೃತ್ಯು
Tuesday, November 12, 2024
ಮೂಡುಬಿದಿರೆ: ಬನ್ನಡ್ಕ ರಾಷ್ಟಿಯ ಹೆದ್ದಾರಿ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ದ್ವಿಚಕ್ರ ವಾಹನ ಸವಾರ, ಸ್ಥಳೀಯವಾಗಿ ಗೂಡಂಗಡಿ ನಡೆಸುತ್ತಿದ್ದ ಅಬ್ದುಲ್ ಘನಿ ಮೃತಪಟ್ಟಿದ್ದಾರೆ.
ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಸಂದೀಪ್ ನಾಯಕ್ ಸಣ್ಣಪುಟ್ಟ ಗಾಯಗಳಾಗಿವೆ. ಅವರ ದೊಡ್ಡಮ್ಮ ಬೇಬಿ ನಾಯ್ಕ್ ಅವರಿಗೆ ಗಂಭೀರವಾಗಿ ಗಾಯಗಳಾಗಿವೆ.
ತಿಂಗಳ ಹಿಂದೆ ಅದೇ ಪರಿಸರದಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ.