ರಾಜ್ಯಮಟ್ಟದ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಯೆನೆಪೋಯ ಕಾಲೇಜ್ ತಂಡ ಚಾಂಪಿಯನ್
Monday, November 18, 2024
ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ತೋಡಾರಿನ ಯೆನೆಪೋಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ ಮತ್ತು 2 ಬೆಳ್ಳಿಯ ಪದಕದೊಂದಿಗೆ ತಂಡ ಚಾoಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ 1 ಚಿನ್ನದ ಪದಕ, 1 ಬೆಳ್ಳಿಯ ಪದಕ, 3 ಕಂಚಿನ ಪದಕ ಗೆದ್ದು ತೃತಿಯ ತಂಡ ಚಾoಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪುರುಷರ 67 ಕೆ.ಜಿ. ವಿಭಾಗದಲ್ಲಿ ಪ್ರನೀತ್ ಶೆಟ್ಟಿ, ಮಹಿಳೆಯರ 55 ಕೆ.ಜಿ, ವಿಭಾಗದಲ್ಲಿ ಮಾನ್ಯ ಎಸ್.ಕೆ. ಹಾಗೂ 71 ಕೆ.ಜಿ. ವಿಭಾಗದಲ್ಲಿ ನಿತ್ಯಾ ಎಸ್.ಪಿ. ಚಿನ್ನದ ಪದಕ ಗೆದ್ದು ಇವರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ, ಗುಂಟೂರ್ ಆಂಧ್ರಪ್ರದೇಶನಲ್ಲಿ ನವೆಂಬರ್ 26ರಿಂದ ಡಿಸೆಂಬರ್ 3 ರವರೆಗೆ ನಡೆಯುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಈ ಕ್ರೀಡಾಪಟುಗಳಿಗೆ ಯೇನೆಪೋಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್ ತರಬೇತಿ ನೀಡುತ್ತಿದ್ದಾರೆ.
