ಕಲಾವಿದರ ಮಧ್ಯೆ ಸಾಮರಸ್ಯ ಬೆಳೆಯಲಿ: ಸುದರ್ಶನ್ ಎಂ.

ಕಲಾವಿದರ ಮಧ್ಯೆ ಸಾಮರಸ್ಯ ಬೆಳೆಯಲಿ: ಸುದರ್ಶನ್ ಎಂ.


ಮೂಡುಬಿದಿರೆ: ಪರಿಸರದ ಕಲಾವಿದರೆಲ್ಲ ಒಟ್ಟಾಗಿ ಸೇರಿಕೊಂಡು ಸಂಘಟನೆಯನ್ನು ಗಟ್ಟಿಗೊಳಿಸಿ ಸಮಾಜದಲ್ಲಿ ಪರಿವರ್ತನೆಯೊಂದಿಗೆ ಕಲಾವಿದರ ನಡುವೆ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸಲಹೆ ನೀಡಿದರು.

ಅವರು ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘ ರಿ. ಮೂಡುಬಿದಿರೆ ಇದರ 12ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪರಿಸರದ ನೂರಾರು ಕಲಾವಿದರು ವಾದ್ಯ ಅಥವಾ ಸಂಗೀತದ ಕ್ಷೇತ್ರದಲ್ಲಿರಬಹುದು ಇದರಲ್ಲೊಂದು ಹೊಸತನವನ್ನು ಕಟ್ಟಿ, ಸಂಘಟನೆಯ ಮೂಲಕ ಅಶಕ್ತ ಕಲಾವಿದರಿಗೆ ಸಹಕಾರವನ್ನು ನೀಡುವಂತಹ ಕೆಲಸವಾಗಬೇಕು ಮತ್ತು ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಪ್ರೋತ್ಸಾಹ ಸಿಗುವಂತ್ತಾಗಬೇಕು ಎಂದರು.

ಸಂಘದ ಗೌರವ ಸಲಹೆಗಾರ್ತಿ ವಕೀಲೆ ಶ್ವೇತಾ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ಯಾಕ್ಸೋಪೋನ್ ವಿದ್ವಾಂಸ ರಾಜರತ್ನಂ ದೇವಾಡಿಗ ಪುತ್ತೂರು ಭಾಗವಹಿಸಿ ಮಾತನಾಡಿ, ಮಂಗಳಕರವಾದ ಕಾರ್ಯಕ್ರಮಗಳಲ್ಲಿ ಮಂಗಳ ವಾದ್ಯಗಳನ್ನು ಪ್ಯಾಂಟ್ ಶಟ್೯ ಹಾಕಿಕೊಂಡು ನುಡಿಸುವುದು ಅಥವಾ ಬಾರಿಸುವುದು ಸರಿಯಲ್ಲ ಶಿಸ್ತುಬದ್ಧವಾಗಿ ಸಾಂಪ್ರಾದಾಯಿಕ ನೆಲೆಯಲ್ಲಿಯೇ ಬಾರಿಸಿದರೆ ಉತ್ತಮ ಉತ್ತಮ ಎಂಬ ಸಲಹೆಯನ್ನು ನೀಡಿದರು.

ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ ಕಡಂದಲೆ, ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಪನ್ಯಾಸಕಿ ವಿನುತಾ ರೈ ಸ್ವಾಗತಿಸಿದರು. ಹನಿ ಪ್ರಾರ್ಥನೆಗೈದರು. ಕೋಶಾಧಿಕಾರಿ ಲಕ್ಷ್ಮೀ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article