
ತ್ರಿಶಾ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಮಂಗಳೂರು: ತ್ರಿಶಾ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ನೇತ್ರಾವತಿ ಹಾಗೂ HDFC ಬ್ಯಾಂಕ್ ಮಂಗಳೂರು ಹಾಗೂ IRCS ಬ್ಲಡ್ ಬ್ಯಾಂಕ್ ಮಂಗಳೂರಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇಂದು ರಕ್ತದಾನ ಶಿಬಿರ ನಡೆಯಿತು.
ಅತಿಥಿಗಳಾಗಿ ಆಗಮಿಸಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್ ಕಟ್ಟೆ ಮಾತನಾಡಿ, ‘ರಕ್ತದಾನ ಮಹಾದಾನ’, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ರಕ್ತದಾನ ಬಹಳ ಮಹತ್ವವಾದದ್ದು ಆಗಿದೆ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕೆಂದು ಹೇಳಿದ ಅವರು ಲಯನ್ಸ್ ಕ್ಲಬ್ ನೇತ್ರಾವತಿಯ ರಕ್ತದಾನ ಶಿಬಿರದ ರಾಯಭಾರಿಯಾದ, 262 ರಕ್ತದಾನ ಶಿಬಿರವನ್ನು ಆಯೋಜಿಸಿದ ಲಯನ್ಸ್ ನಾಗೇಶ್ ಎಂಜೆಎಫ್ ಅವರು ಯಾವುದೇ ಜಾತಿ, ಮತ, ಪಂಥ ಆದರೂ ನಮ್ಮೆಲ್ಲರ ರಕ್ತದ ಬಣ್ಣ ಕೆಂಪು. ರಕ್ತದಾನ ಎಂಬುದು ಶ್ರೇಷ್ಠವಾದದು, ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ್ ಕಾಮತ್ ವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ನಿರ್ಮಲ ಪ್ರಮೋದ್, ಅಸೋಸಿಯೇಟ್ ಕ್ಯಾಬಿನೆಟ್ ಸೆಕ್ರೆಟರಿ ಆಶಾ ನಾಗರಾಜ್, IRCS ಬ್ಯಾಂಕ್‌ನ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, HDFC ಬ್ಯಾಂಕ್ ಮ್ಯಾನೇಜರ್ ಲಕ್ಷ್ಮೀ ಉಪಾಧ್ಯಕ್ಷ ಹಾಗೂ ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ, ವೈಆರ್‌ಸಿ ಕಾರ್ಯಕ್ರಮ ಅಧಿಕಾರಿ ಪ್ರೊ. ಶಿಲ್ಪಾ ಶೆಟ್ಟಿ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಶಿವಕುಮಾರ್ ಎಂ.ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಜುಬೈದ ಸಮ್ರಾ ನಿರೂಪಿಸಿ, ಖುಷಿ ವಂದಿಸಿದರು. 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.