ಡಿ.22 ರಂದು ಅರಸು ಕಂಬಳ

ಡಿ.22 ರಂದು ಅರಸು ಕಂಬಳ

ಮೂಲ್ಕಿ: ಸುಮಾರು 400 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಮುಲ್ಕಿ ಸೀಮೆಯ ಅರಸು ಕಂಬಳ ಡಿಸೆಂಬರ್ 22ರಂದು ನಡೆಯಲಿದೆ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು 

ಅವರು ಪಡಪಣಂಬೂರಿನ ಮುಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ಇಂದು ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಅವರು, ಮಿಜಾರುಗುತ್ತು ಆನಂದ ಆಳ್ವರ ಕಂಬಳ ಸಹಿತ ಅನೇಕ ಹಿರಿಯರ ಮುಂದಾಳತ್ವದಲ್ಲಿ ಕಂಬಳವು ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು 2022 ರಲ್ಲಿ ಅನಿವಾರ್ಯ ಕಾರಣಗಳಿಂದ ಸಮಿತಿ ಬದಲಾವಣೆ ಮಾಡಬೇಕಾಗಿ ಬಂದಾಗ ಹೊಸ ಸಮಿತಿ ರಚನೆ ಆಯಿತು. ಆದರೆ ಪ್ರಸಕ್ತ ಸಮಿತಿಯ ಕೆಲವೊಂದು ಕಾರ್ಯಗಳು ಅರಮನೆ ಘನತೆ ಗೌರವಗಳಿಗೆ ಕುಂದು ಉಂಟಾಗುವ ಹೇಳಿಕೆಗೆ ಕಂಬಳ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕ್ಷಮಾಪಣೆ ಕೇಳಿದ್ದಾರೆ

 ಕಂಬಳ ಸಮಿತಿ ಕಂಬಳವನ್ನು ವಿಜೃಂಭಣೆಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿದ್ದು ಕಂಬಳ ನಡೆಸುವಸಂಪೂರ್ಣ ಅಧಿಕಾರ ಅರಮನೆಯದ್ದಾಗಿರುತ್ತದೆ ಎಂದರು 

ಕಂಬಳದ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ವಿಶ್ವ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಭಾವ ಡಾ ದೇವಿ ಪ್ರಸಾದ್ ಶೆಟ್ಟಿ, ಉದ್ಯಮಿ ಅರವಿಂದ ಪೂಂಜಾ ಶ್ರಮಿಸಿದ್ದಾರೆ ಎಂದರು

ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿದರು 

ಈ ಸಂದರ್ಭ ಅರಸು ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಕೋಲ್ನಾಡುಗುತ್ತು ಮಾತನಾಡಿ ಸಮಿತಿಯಲ್ಲಿನ ಎಲ್ಲ ಭಿನ್ನಾಭಿಪ್ರಾಯ ಬಗೆಹರಿಸಲಾಗಿದ್ದು ಕಂಬಳ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,

 ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್ ವಸಂತ್ ಬೆರ್ನಾಡ್, ಸುನಿಲ್ ಆಳ್ವ ,ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ  ಸತೀಶ್ ಅಂಚನ್, ಶಶಿಂದ್ರ ಸಾಲ್ಯಾನ್,ಉಮೇಶ್ ಪೂಜಾರಿ, ಗೌತಮ್ ಜೈನ್ ಮುಲ್ಕಿ ಅರಮನೆ, ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article