
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶನ್ 24 ಉದ್ಘಾಟನೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್ಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್ಮೆಂಟ್ ಐಟಿ ಫೆಸ್ಟ್ ವಿಶನ್ 24ನ ಸ್ಪರ್ಧೆಗಳಿಗೆ ಇಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ವರ್ತನೆಗೆ ಆಂತರಿಕ ತುಮುಲವೇ ಕಾರಣ. ಆದ್ದರಿಂದ ಮನಸ್ಸನು ಆದಷ್ಟು ಶುದ್ಧವಾಗಿರಿಸಿಕೊಳ್ಳಬೇಕು. ನಾವು ಸಮಾಜಕ್ಕೆ ನೀಡುವ ಕೊಡುಗೆಗಳಿಂದಲೇ ಜನರು ನಮ್ಮನ್ನು ನೆನಪಿಸುತ್ತಾರೆ. ಆದುದರಿಂದ ಉತ್ತಮ ಚಿಂತನೆಗಳನ್ನೇ ಮಡಬೇಕು. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಯೋಚನಾ ಶಕ್ತಿಯ ಅಭಿವೃದ್ಧಿಯಾಗುತ್ತದೆ. ಧನಾತ್ಮಕ ಚಂತನೆಯಿಂದ ಭಾಗವಹಿಸಿದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದು ಶುಭಕೋರಿದರು.
ಕಾಲೇಜಿನ ಪರೀಕ್ಷಾಂಗ ಕುಲಸಚಿವ, ಗಣಕ ವಿಜ್ಞಾನ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಪ್ರೊ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾಲೇಜಿನಲ್ಲಿ ೨೦೧೨ರಿಂದ ವಿಶನ್ ಇಂಟ್ರಾ ಡಿಪಾರ್ಟ್ಮೆಂಟ್ ಐಟಿ ಫೆಸ್ಟ್ ಆಯೋಜಿಸಲಾಗುತ್ತಿದ್ದು ನಿಗದಿತ ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕೌಶಲ್ಯವರ್ಧನೆಗಾಗಿ ಈ ಫೆಸ್ಟ್ನ್ನು ಆಯೋಜಿಸುತ್ತಿದ್ದೇವೆ. ವಿಷನ್ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಕಾಲೇಜಿನ ಗಣಕವಿಜ್ಞಾನ ವಿಭಾಗವು ಕಲ್ಪಿಸುವ ಉತ್ತಮ ವೇದಿಕೆಯಾಗಿದೆ. ವಿಶನ್ ಸ್ಪರ್ಧೆಗಳ ಆಯೋಜನೆ ಪ್ರಕಟವಾದಂದಿನಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸ್ಪರ್ಧಾಮನೋಭಾವ, ಆತ್ಮವಿಶ್ವಾಸ ಹಾಗೂ ತಂಡಸ್ಪೂರ್ತಿ ಪ್ರಕಟಗೊಂಡಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ದೊರೆತ ಅವಕಾಶಗಳು ವಿದ್ಯಾರ್ಥಿಗಳ ಮನೋಬಲವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹೇಳಿ ವಿಶನ್-೨೪ನ ಅಂಗವಾಗಿ ಆಯೋಜಿಸಲಾಗುವ ಸ್ಪರ್ಧೆಗಳ ವಿವರವನ್ನು ಹೇಳಿದರು.
ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೈತ್ರಾ ಎನ್.ಪಿ. ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಾರಿಜಾ ಎಂ. ಕಾರ್ಯಕ್ರಮ ನಿರೂಪಿಸಿದರು. ಪಿನ್ಯಾಕಲ್ ಐಟಿ ಕ್ಲಬ್ನ ಸಂಯೋಜಕಿ ಗೀತಾ ಪೂರ್ಣಿಮಾ ಕೆ. ಹಾಗೂ ಪಿನ್ಯಾಕಲ್ ಐಟಿ ಕ್ಲಬ್ನ ಅಧ್ಯಕ್ಷ ಲೆನಿನ್ ಉಪಸ್ಥಿತರಿದ್ದರು.
ವಿಶನ್ 2024ರಲ್ಲಿ ಡಾಕ್ಯುಮೆಂಟರಿ, ಪೇಪರ್ ಪ್ರೆಸೆಂಟೇಶನ್, ಕೊಲ್ಯಾಜ್ ಮೇಕಿಂಗ್, ಐಡಿಯೇಶನ್, ಕೋಡ್ ವಾರ್, ಹ್ಯಾಕಥಾನ್, ವೆಬ್ ಸೈಟ್ ಡಿಜೈನ್, ಫೋಟೋಗ್ರಫಿ, ಐಟಿ ಕ್ವಿಜ್, ಐಒಟಿ ಮೋಡೆಲ್ ಡಿಸೈನ್, ಬ್ರೇಕ್ ದ ಕ್ವೆರಿ, ಐಟಿ ಮ್ಯಾನೇಜರ್, ಗ್ರೂಪ್ ಡ್ಯಾನ್ಸ್, ಫ್ಯಾಶನ್ ಶೋ, ಇ-ಗೇಮ್ಸ್ ಎಂಬ 15 ಸ್ಪರ್ಧೆಗಳನ್ನು ಒಳಗೊಂಡಿದೆ. ಕೋಡ್ ವಾರ್, ವೆಬ್ ಸೈಟ್ ಡಿಸೈನ್, ಪೇಪರ್ ಪ್ರೆಸೆಂಟೇಶನ್, ಫೊಟೋಗ್ರಫಿ, ಐಟಿ ಮ್ಯಾನೇಜರ್ಮುಂತಾದ ಸ್ಪರ್ಧೆಗಳು ಓರ್ವ ಸ್ಪರ್ಧಾಳುವನ್ನೊಳಗೊಂಡಿದ್ದರೆ ಇತರ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಳು ತಂಡವಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ಸ್ಪರ್ಧೆಗಳ ಪ್ರಾರಂಭಿಕ ಸುತ್ತುಗಳು ಮುಗಿದಿದ್ದು ಅಂತಿಮ ಹಂತದ ಸ್ಪರ್ಧೆಗಳನ್ನು ಈ ವೇದಿಕೆಯಲ್ಲಿ ಆಯೋಜಿಸಲಾಯಿತು.