ರಾಷ್ಟ್ರೀಯ ಮಟ್ಟದ ಕ್ರಾಸ್ ಕಂಟ್ರಿ, ಮಂಗಳೂರು ವಿವಿ ಟೀಮ್ ಚಾಂಪಿಯನ್: ಮುಂಬೈವಿವಿ ರಾಜ್ ತಿವಾರಿ ವೈಯುಕ್ತಿಕ ಚಾಂಪಿಯನ್

ರಾಷ್ಟ್ರೀಯ ಮಟ್ಟದ ಕ್ರಾಸ್ ಕಂಟ್ರಿ, ಮಂಗಳೂರು ವಿವಿ ಟೀಮ್ ಚಾಂಪಿಯನ್: ಮುಂಬೈವಿವಿ ರಾಜ್ ತಿವಾರಿ ವೈಯುಕ್ತಿಕ ಚಾಂಪಿಯನ್


ಪುತ್ತೂರು: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ.19ರಂದು ನಡೆದ ಅಖಿಲ ಭಾರತೀಯ ಅಂತರ್ ವಿವಿಗಳ 10 ಕಿ.ಮೀ.ನ ಹುಡುಗರ ಕ್ರಾಸ್ ಕಂಟ್ರಿ  ಚಾಂಪಿಯನ್‌ಶಿಪ್‌ನ ಟೀಮ್ ಚಾಂಪಿಯನ್ ಶಿಪ್ ಅತಿಥೇಯ ಮಂಗಳೂರು ವಿಶ್ವವಿದ್ಯಾನಿಲಯದ ಪಾಲಾಗಿದ್ದು, ಇದರ ವ್ಯಾಪ್ತಿಯ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ತಂಡವು 69 ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಚಾಂಪಿಯನ್ ಶಿಪ್ ಅನ್ನು ತಮ್ಮದಾಗಿಸಿಕೊಂಡಿದೆ. ವೈಯಕ್ತಿಕವಾಗಿ ಮುಂಬೈ ವಿವಿಯ ರಾಜ್ ತಿವಾರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 

74 ಪಾಯಿಂಟ್‌ಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನ ಮುಂಬೈ ವಿಶ್ವವಿದ್ಯಾನಿಲಯದ ಪಾಲಾದರೆ, ೮೩ ಪಾಯಿಂಟ್‌ಗಳಿಸಿದ ರಾಜಸ್ಥಾನದ ಜೈಪುರ ವಿಶ್ವವಿದ್ಯಾನಿಲಯದ ಮೂರನೇ ಸ್ಥಾನವನ್ನು  ತಮ್ಮದಾಗಿಸಿಕೊಂಡಿದೆ. ನಾಲ್ಕನೇ ಸ್ಥಾನವನ್ನು  89 ಪಾಯಿಂಟ್ ಪಡೆದ ಪಂಜಾಬ್‌ನ ಲಾಮ್ರೀನ್ ಯುನಿವರ್ಸಿಟಿ ತನ್ನದಾಗಿಸಿಕೊಂಡಿದೆ.

10 ಕಿ.ಮೀ. ದೂರವನ್ನು 30.59 ನಿಮಿಷದಲ್ಲಿ ಕ್ರಮಿಸಿ, ಗುರಿ ಮುಟ್ಟುವ ಮೂಲಕ ವೈಯಕ್ತಿಕವಾಗಿ ಮುಂಬೈ ಯುನಿವರ್ಸಿಟಿಯ ರಾಜ್ ತಿವಾರಿ ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಕೊಲ್ಲಾಪುರ ವಿಶ್ವವಿದ್ಯಾನಿಲಯದ ಪ್ರಧಾನ್ ಕಿರ್ಲುಕರ್ (31.28 ನಿ.) ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನವನ್ನು ಕೊಲ್ಲಾಪುರ ಶಿವಾಜಿ ವಿವಿಯ ಅಭಿಷೇಕ್ ದೇವ್‌ಕಟೆ (31.30 ನಿ.) ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನವನ್ನು ಗೋರಖ್‌ಪುರದ ದೀನ್‌ದಯಾಳ್ ಉಪಾಧ್ಯಾಯ ವಿವಿಯ ದಿನೇಶ್ ಕುಮಾರ್ (31.36 ನಿ.) ಪಡೆದುಕೊಂಡಿದ್ದಾರೆ. ಐದನೇ ಸ್ಥಾನವನ್ನು ಕ್ಯಾಲಿಕಟ್ ಯುನಿವರ್ಸಿಟಿಯ ನಬೀಲ್ ಸಾಹಿ ಎಂ.ಪಿ. (31.40 ನಿ.) ಪಡೆದುಕೊಂಡಿದ್ದಾರೆ. ಆರನೇ ಸ್ಥಾನವನ್ನು ಪಂಜಾಬ್‌ನ ಲಾಮ್ರಿನ್ ಟೆಕ್ ಸ್ಕಿಲ್ ವಿಶ್ವವಿದ್ಯಾನಿಲಯದ ಶುಭಂ ಬಲಿಯಾನ್ (31.41 ನಿ.) ಪಡೆದುಕೊಂಡಿದ್ದಾರೆ. ಏಳನೇ ಸ್ಥಾನವನ್ನು ಮುಂಬೈ ಯುನಿವರ್ಸಿಟಿಯ ಮೃನಾಲ್ ಸರೋಡೆ (31.46 ನಿ.) ಪಡೆದುಕೊಂಡಿದ್ದಾರೆ. ೮ನೇ ಸ್ಥಾನವನ್ನು ಮಂಗಳೂರು ವಿವಿಯ ನವೃತನ್ (31.47 ನಿ.) ಪಡೆದುಕೊಂಡಿದ್ದಾರೆ. ಒಂಬತ್ತನೇ ಸ್ಥಾನವನ್ನು ನಾಗ್ಪುರ್‌ನ ರಾಷ್ಟ್ರ ಸಂತ ತುಕ್ಡೋಜೀ ಮಹಾರಾಜ್ ವಿವಿಯ ಸೌರವ್ ತಿವಾರಿ (31.49 ನಿ.) ಪಡೆದುಕೊಂಡಿದ್ದಾರೆ. ೧೦ನೇ ಸ್ಥಾನವನ್ನು ಜೈಪುರದ ರಾಜಸ್ಥಾನ ವಿವಿಯ ಬಿಟ್ಟು (31.52) ಪಡೆದುಕೊಂಡಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗೆ 25,000 ರೂ. ನಗದು, ಟ್ರೋಫಿ, ಸ್ಮಾರ್ಟ್ ವಾಚ್ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ವಿಜೇತರಿಗೆ 10 ಸಾವಿರ ರೂ. ನಗದು, ಟ್ರೋಫಿ, ಸ್ಮಾರ್ಟ್ ವಾಚ್, ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.

ಈ ಚಾಂಪಿಯನ್ ಶಿಪ್‌ನಲ್ಲಿ ಅಖಿಲ ಭಾರತ ಮಟ್ಟದ 141 ವಿಶ್ವವಿದ್ಯಾನಿಲಯಗಳ ಒಟ್ಟು 846 ಸ್ಪರ್ಧಿಗಳು ಭಾಗವಹಿಸಿದ್ದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article