ದೇವಸ್ಥಾನದಲ್ಲಿ ಕಳವು: ಆರೋಪಿ ಸೆರೆ

ದೇವಸ್ಥಾನದಲ್ಲಿ ಕಳವು: ಆರೋಪಿ ಸೆರೆ

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಸುಬ್ರಹ್ಮಣ್ಯದ ಅಭಯ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧಾರವಾಡದ ವೀರಣ್ಣ ಗೌಡ (26) ಎಂದು ಗುರುತಿಸಲಾಗಿದ್ದು, ನ.3ರಂದು ರಾತ್ರಿ ದೇವಸ್ಥಾನದಲ್ಲಿ ಪೂಜಾ ಪರಿಕರಗಳು ಹಾಗೂ ಸಿಸಿಟಿವಿ ಕ್ಯಾಮರಾ ಕದ್ದೊಯ್ದಿದ್ದಾರೆ. ಕುಕ್ಕೆ ದೇವಸ್ಥಾನದ ಸಿಇಒ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶಂಕಿತನನ್ನು ಗುರುತಿಸಿದ್ದು, ಆರೋಪಿ ದೇವಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ಅಲೆದಾಡುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಆರೋಪಿಯು ಗೋಣಿ ಚೀಲದಲ್ಲಿ ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸುಳ್ಯ ಸಿಐ ತಿಮ್ಮಪ್ಪ ನಾಯ್ಕ, ಎಸ್‌ಐ ಕಾರ್ತಿಕ್ ಹಾಗೂ ತಂಡದ ಸದಸ್ಯರಾದ ಮಹೇಶ್, ಆಕಾಶ್, ನವೀನ್, ಸಂಧ್ಯಾ, ಮಹೇಶ್, ಸತೀಶ್, ಪರಮೇಶ್ ಭಾಗಿಯಾಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article