
ನ.12 ರಂದು ಬೀದಿ ಶ್ವಾನ ಸಂರಕ್ಷಣಾ ದಿನ ಆಚರಣೆಗೆ ಚಾಲನೆ
Tuesday, November 12, 2024
ಉಡುಪಿ: ನ.12 ರಂದು ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ ಹೃದಯವಂತ ಪ್ರಾಣಿ ಪ್ರಿಯರ ಉಪಸ್ಥಿತಿಯಲ್ಲಿ ಪ್ರತಿ ವರ್ಷ ನವೆಂಬರ್ 12 ರಂದು ಬೀದಿ ಶ್ವಾನ ಸಂರಕ್ಷಣಾ ದಿನ ಆಚರಣೆಗೆ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಘರಾಮ್ ಶೆಟ್ಟಿ ಕಾಪು, ವಿಕ್ಕಿ ಮಡಂಬು, ರಾಘವೇಂದ್ರ ಪ್ರಭು, ತನುಲ, ಗೀತಾಂಜಲಿ ಎಮ್. ಸುವರ್ಣ, ವೀಣಾ ಎಸ್. ಶೆಟ್ಟಿ, ದಾಮೋದರ ಶರ್ಮಾ, ಸುಧೀಂದ್ರ ಐತಾಳ್ ಸಾಲಿಗ್ರಾಮ, ರವೀಂದ್ರ ಹೆಬ್ಬಾರ್ ಬ್ರಹ್ಮಾವರ, ಪ್ರಶಾಂತ್ ಪೂಜಾರಿ ಕಾಪು, ನವೀನ್ ಕಾಪು ಮತ್ತು ಶ್ರೀ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಬೀದಿ ಶ್ವಾನಗಳಿಗೆ ಆಹಾರ ನೀಡಲಾಯಿತು.