
ಶ್ರೀ ಕ್ಷೇತ್ರ ಧ.ಗ್ರಾ.ಯೋ.ಯಿಂದ 25 ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ
Sunday, December 29, 2024
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬಂಟ್ವಾಳ ತಾಲೂಕು ಇದರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದ ಡಾ. ಹೇಮಾವತಿ ವಿ ಹೆಗ್ಗಡೆ ಅವರ ವಾತ್ಸಲ್ಯಮಯಿ ಚಿಂತನೆಯಂತೆ ತಾಲೂಕಿನ 25 ಆಶಕ್ತ ಕುಟುಂಬಗಳಿಗೆ ಗೃಹೋಪಯೋಗಿ ಅಗತ್ಯ ಸಾಮಗ್ರಿಗಳನ್ನೊಪಲಗೊಂಡ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಮಾಸಿಕವಾಗಿ ಒಂದು ಸಾವಿರದಂತೆ ಮಾಶಾಸನ ಹಾಗೂ ಪೌಷ್ಠಿಕಾಂಶ ಭರಿತ ಆಹಾರವನ್ನು ಮಾಸಿಕವಾಗಿ ವಾತ್ಸಲ್ಯ ಕಿಟ್ ವಿತರಿಸಲಾಗುತ್ತಿದೆ.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿಗಳಾದ ಜಯಾನಂದ, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು ಜನಜಾಗೃತಿ ಸದಸ್ಯರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರುತಿ, ಮೇಲ್ವಿಚಾರಕಿ ಸವಿತಾ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.