
ಕುಕ್ಕೆ ಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಭಕ್ತ ಸಾಗರ
Sunday, December 29, 2024
ಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಅಧಿಕ ಭಕ್ತ ಸಂದಣಿ ಕಂಡುಬಂತು.
ಶುಕ್ರವಾರ, ಶರವಾರ ಎರಡನೇ ಶನಿವಾರ, ರವಿವಾರ ಸೇರಿದಂತೆ ಸರಣಿ ರಜೆ ಹಾಗೂ ವರ್ಷಾಂತ್ಯದ ರವಿವಾರ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೂರ ಊರುಗಳಿಂದ ಭಕ್ತರು ಆಗಮಿಸಿದ್ದರು. ಬಾರೀ ಸಂಖ್ಯೆಯ ಭಕ್ತರ ಆಗಮನದಿಂದ ಕ್ಷೇತ್ರದ ವಾಹನ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದು, ಇತರೆ ಕಡೆಗಳಲ್ಲಿ ವಾಹನ ಪಾರ್ಕ್ ಮಾಡಿರುವುದು ಕಂಡುಬಂತು.
ದೇವಳದ ಹೊರಾಂಗಣ ಹಾಗೂ ರಥಬೀದಿ, ಪೇಟೆಯ ರಸ್ತೆಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು. ಭಕ್ತರ ದಟ್ಟಣೆ ನಡುಬೆ ಭಕ್ತರು ಶ್ರೀ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.