
ಬಿ.ಸಿ.ರೋಡಿನಲ್ಲಿ ಬುಲೆಟ್ ಕಾಣೆ
Thursday, December 26, 2024
ಬಂಟ್ವಾಳ: ಬಿ.ಸಿ ರೋಡ್ ಸರ್ಕಲ್‌ನ ಬಳಿಯ ಕುಲಾಲ್ ಭವನಕ್ಕೆ ಹೋಗುವ ದಾರಿ ಬದಿಯಲ್ಲಿರುವ ಗ್ಯಾರೇಜ್ ವೊಂದರ ಪಕ್ಕದಲ್ಲಿರಿದಲಾಗಿದ್ದ ಬುಲೆಟ್ ಬೈಕ್ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಲ್ಯಾರ್ ಗುಡ್ಡೆ ಅಂಬ್ಲಮೊಗರು ನಿವಾಸಿ ಸಿದ್ದೀಕ್ ಎಂಬವರಿಗೆ ಸೇರಿದ ಬುಲೆಟ್ ಮೋಟರ್ ಸೈಕಲ್‌ನ್ನು ಕಳವುಗೈಯಲಾಗಿದೆ. ಗ್ಯಾರೇಜ್‌ನ ಪಕ್ಕದಲ್ಲಿ ಬೈಕ್ ಇಟ್ಟು ಮಾಣಿಗೆ ಹೋಗಿ ವಾಪಸ್ಸು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.