
ಅಂಗಡಿಯಿಂದ ಅಪಾರ ಸೊತ್ತು ಕಳವು
Friday, December 6, 2024
ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಬಂಡಸಾಲೆ ಎಂಬಲ್ಲಿ ಹೋಲ್ ಸೇಲ್ ಅಂಗಡಿಯೊಂದರ ಶಟರ್ ನ ಬೀಗ ಮುರಿದು ಒಳಪ್ರವೇಶಿಸಿ ನಗದು ಹಾಗೂ ಕೆಲ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.
ಇಲ್ಲಿನ ಜೇಸಿಂತಾ ಲೋಬೊ (63) ಅವರಿಗೆ ಸೇರಿದ ಹೋಲ್ ಸೇಲ್ ಅಂಗಡಿಯಲ್ಲಿ ಈ ಕಳವು ನಡೆದಿದೆ. ಎಂದಿನಂತೆ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋಗಿದ್ದು, ಬೆಳಿಗ್ಗೆ ಸ್ಥಳೀಯರೋರ್ವರು ನೀಡಿದ ಮಾಹಿತಿಯನ್ವಯ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶಟರ್ ತೆರದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ.
ಕಳ್ಲಕರು ಅಂಗಡಿಯ ಒಳನುಗ್ಗಿ ಡ್ರಾಯರ್ ನಲ್ಲಿದ್ದ ನಗದು 8 ಸಾ.ರೂ., ಹಳೆಯ ಬ್ಯಾಗ್-2, ಕಿಪ್ಯಾಡ್ ಮೊಬೈಲ್ -01, ಹೆಸರು ಬೇಳೆ 2 ಕೆಜಿ, ಡೌವ್ ಸಾಬುನುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ಕಳವಾದ ಒಟ್ಟು ಸೊತ್ತುಗಳ ಮೌಲ್ಯ ರೂ ಒಟ್ಟು 9,575 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.