ಡಿ.29-30ರಂದು ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆ' ಮತ್ತು ಟೈಂ ಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್-೨೪

ಡಿ.29-30ರಂದು ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆ' ಮತ್ತು ಟೈಂ ಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್-೨೪


ಮಂಗಳೂರು: ಡಿ.29ರಂದು ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ 39ನೇ ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆ ಮತ್ತು  ಡಿ.30ರಂದು ಟೈಂ ಸ್ಕ್ವೇರ್‌ ಮ್ಯೂಸಿಕ್‌ ಫೆಸ್ಟಿವಲ್-2024 ಜರುಗಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

ಡಿ.29ರಂದು ಬೆಳಿಗ್ಗೆ 8:35ಕ್ಕೆ ಎಕ್ಸ್‌ಪರ್ಟ್ ದಿನಾಚರಗಳ ಅಂಗವಾಗಿ ಧ್ವಜಾರೋಹಣ ನಡೆಯಲಿದೆ. ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್‌.ಎನ್‌. ಮುಖ್ಯ ಅತಿಥಿಯಾಗಿ ಭಾಗವಹಿಸುವರು. 11:30ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಎ.ಅಮೃತ್ ಕಿಣಿ ಭಾಗವಹಿಸುವರು.

ಸಂಜೆ 5.20ಕ್ಕೆ ನಡೆಯುವ ಎಕ್ಸ್‌ ಪರ್ಟ್ ದಿನಾಚರಣೆ ಸಮಾರಂಭವನ್ನು ಮನಿಲಾದ ಏಷಿಯನ್ ಡೆವಲಪ್‌ಮೆಂಟ್‌ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರರಾದ ಪೊನ್ನುರಾಜ್ ಅವರು ಉದ್ಘಾಟಿಸುವರು.

ಯೇನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಯೇನೆಪೋಯ ಅಬ್ದುಲ್ ಕುಂಞ ಗೌರವ ಅತಿಥಿಯಾಗಿ ಭಾಗವಹಿಸುವರು. ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್‌. ನಾಯಕ್

ಅಧ್ಯಕ್ಷತೆ ವಹಿಸಲಿದ್ದಾರೆ. ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್‌ ಪ್ರಾಸ್ತಾವಿಕ ಭಾಷಣ ಮಾಡುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು. 

ಶಿವ ಮ್ಯೂಷನ್ ಸಂಗೀತೋತ್ಸವ:

ಡಿ.30ರಂದು ಸಂಜೆ ನಡೆಯುವ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರನ್ನೊಳಗೊಂಡ 'ಶಿವ' ತಂಡದ

ಅಮೋಘ ಪ್ಯೂಷನ್ ಸಂಗೀತೋತ್ಸವವನ್ನು ಖ್ಯಾತ ದಾಸ ಸಾಹಿತ್ಯ, ಗಾಯಕ ಡಾ.ವಿದ್ಯಾಭೂಷಣ ಅವರು ಉದ್ಘಾಟಿಸುವರು.

ಖ್ಯಾತ ಸಿತಾರ್ ಕಲಾವಿದರಾದ ಉಸ್ತಾದ್ ರಫೀಕ್ ಖಾನ್ ಮತ್ತು ಅವರ ಶಿಷ್ಯ ಅಂಕುಶ್ ಎನ್. ನಾಯಕ್ ನೇತೃತ್ವದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪಂ.ಪ್ರವೀಣ್‌ ಡಿ. ರಾವ್(ಕೀಬೋರ್ಡ್), ವಿದ್ವಾನ್ ಬಿ.ಸಿ. ಮಂಜುನಾಥ್‌(ಮೃದಂಗ), ಮಂಜುನಾಥ್ ಸತ್ಯಶೀಲ್(ಡ್ರಮ್ಸ್), ವಿನಯ್ ಶರ್ವ(ಗಾಯನ), ರಾಜೇಶ್ ಭಾಗವತ್ (ತಬ್ಲಾ ಮತ್ತು ಪರ್ಕ್ಯುಶನ್), ಪಿ.ಕೆ.ಸಂತೋಷ್ (ಘಟಂ), ರಸ್ಸೆಲ್ ರಾಡ್ರಿಗಸ್ (ಬಾಸ್ ಗಿಟಾರ್) ಸಾಥ್

ನೀಡುವರು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು ಉಚಿತ ಪಾಸ್‌ಗಾಗಿ ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಕಾಲೇಜಿನ ಕಚೇರಿ(9916885919) ಅಥವಾ ವಳಚ್ಚಿಲ್‌ ಎಕ್ಸ್‌ಪರ್ಟ್ ಕಾಲೇಜು ಕಚೇರಿ(9844982004)ಯನ್ನು

ಸಂಪರ್ಕಿಸಬಹುದು ಎಂದು ಕಾಲೇಜು ಉಪ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ಉಡುಪ ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕಾರ್ಯಕ್ರಮ ನಿರ್ದೇಶಕಿ ಧೃತಿ ಬಿ. ಹೆಗ್ಡೆ, ಮಾಧ್ಯಮ ಸಂಯೋಜಕರಾದ ಸುರೇಶ್‌ ಎಡನಾಡು ಮತ್ತು ಕರುಣಾಕರ ಬಳ್ಳೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article