
ಸಿ.ಟಿ. ರವಿ ಎನ್‌ಕೌಂಟರ್: ಜೋಶಿ ಹೇಳಿಕೆಗೆ ಆಕ್ರೋಶ
ಮಂಗಳೂರು: ಬಿಜೆಪಿ ನಾಯಕ, ವಿಧಾನ ಪರಿಷತ್ ಸಚಿವ ಸಿ. ಟಿ. ರವಿಯರನ್ನು ಎನ್‌ಕೌಂಟರ್ ಮಾಡುವ ಷಡ್ಯಂತ್ರ ನಡೆದಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪ್ರಹ್ಲಾದ್ ಜೋಶಿವಯರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಜೋಶಿಯವರ ಮನಸೋ ಇಚ್ಛೆ ಹೇಳಿಕೆಯನ್ನು ಒಪ್ಪುವಂತಿಲ್ಲ. ಯಾರನ್ನೂ ಕೇಳಿದರು ಈ ಹೇಳಿಕೆಯಲ್ಲಿ ಒಂದಾಂಶ ಕೂಡಾ ಸತ್ಯ ಇಲ್ಲ ಎಂದು ಹೇಳುತ್ತಾರೆ. ಜೋಶಿಯವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಒಳ್ಳೆಯದಲ್ಲ ಎಂದರು.
ಸಿ. ಟಿ. ರವಿಯವರು ಸ್ವಲ್ಪ ಕೋಪದಿಂದ ವರ್ತಿಸಿದ್ದಾರೆ. ಅವರ ಮೇಲೆ ನೇರವಾಗಿ ಹಲ್ಲೆಯಾಗಿಲ್ಲ. ಪೊಲೀಸರು ತಮ್ಮ ಮಾಹಿತಿಯ ಆಧಾರದಲ್ಲಿ ಕ್ರಮ ತೆಗೆದುಕೊಂಡಿದ್ದಾರೆ. ಈ ದೂರಿಗೂ ಆ ದೂರಿಗೂ ಹೋಲಿಕೆ ಬೇಡ. ಸಿ.ಟಿ. ರವಿ ಆಕ್ಷೇಪಾರ್ಹ ಪದ ಹೇಳಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಇದೆ. ಈ ಬಗ್ಗೆ ಯಾರು ಕೂಡಾ ಕೇಳುತ್ತಿಲ್ಲ ಬೇರೆ ವಿಚಾರದ ಬಗ್ಗೆನೇ ಮಾತನಾಡುತ್ತಿದ್ದಾರೆ ಸಿ.ಟಿ. ರವಿ ಹೇಳಿಕೆಗೆ ಬಗ್ಗೆ ತನಿಖೆ ಯಾಗುತ್ತಿದೆ ಏನು ಕ್ರಮ ಆಗಬೇಕೋ ಅದು ಆಗಿಯೇ ಆಗುತ್ತದೆ ರವಿ ಅಕ್ಷೇಪಾರ್ಹ ಪದ ಬಳಕೆ ಸತ್ಯ ರವಿಯವರನ್ನು ಬಿಜೆಪಿಯವರು ಸಮರ್ಥಿಸುತ್ತಿದ್ದಾರೆ. ಸಂಘ ಪರಿವರದವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ರವಿಯವರ ಬಗ್ಗೆ ಹೇಳೋರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ನೂತನ ಸ್ಕ್ಯಾನಿಂಗ್ ವ್ಯವಸ್ಥೆಯ ಕುರಿತಂತೆ ಮಾತನಾಡಿದ ಅವರು,. ಸ್ಕ್ಯಾನಿಂಗ್ ವ್ಯವಸ್ಥೆಯ ಲೋಪವನ್ನು ಬಗೆ ಹರಿಸಿದ್ದೇವೆ. ತುರ್ತು ಸಂಧರ್ಭದಲ್ಲಿ ಪ್ರೊಸೀಝರ್‌ಗಳನ್ನು ಮಾಡಬೇಕಂದಿಲ್ಲ ಅನಾವಶ್ಯಕ, ಅನಗತ್ಯ ಸ್ಕ್ಯಾನಿಂಗ್ ತಡೆಯಲು ಈ ವ್ಯವಸ್ಥೆ ಯನ್ನು ಜಾರಿಮಾಡುತ್ತಿದ್ದೇವೆ ಅನಗತ್ಯ ಪ್ರಕ್ರಿಯೆ ಯನ್ನು ತಡೆ ಹಿಡಿಯಲು ಬದಲಾವಣೆ ಅವಶ್ಯಕವಾಗಿದೆ ಒಂದೆರಡು ಸಮಸ್ಯೆಯಾಗಿದ್ದು ಹೌದು, ಅದನ್ನು ಈಗ ಬಗೆ ಹರಿಸಿದ್ದೇವೆ ಎಂದರು.