ಇಬ್ಬರು ದನಗಳ್ಳರ ಬಂಧನ

ಇಬ್ಬರು ದನಗಳ್ಳರ ಬಂಧನ

ಮಂಗಳೂರು: ಎರಡು ಪ್ರತ್ಯೇಕ ದನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಂಗ ಬಂಧನ ವಿಧಿಸಿದೆ.

ಮೂಡುಬಿದಿರೆಯ ಕಲ್ಲಬೆಟ್ಟು ನಿವಾಸಿಗಳಾದ ಮೊಹಮ್ಮದ್ ರಫೀಕ್ ಯಾನೆ ರಫೀಕ್ (31), ಶೌಕತ್ ಅಲಿ ಯಾನೆ ಶೌಕತ್ (34) ಎಂಬುವವರನ್ನು ಬಂಧಿತ ಆರೋಪಿಗಳು. 

ಘಟನೆಯ ವಿವರ:

2024 ರ ಅ.19 ರಂದು ತಂಕ ಎಡಪದವು ಗ್ರಾಮ, ಪಂಚಾಯತ್ ಕಚೇರಿಯ ಬಳಿ ಮೇಯಲು ಬಿಟ್ಟ ದನಗಳನ್ನು ಮತ್ತು 2024 ರ ಅ.21 ರಂದು ತಂಕ ಎಡವದವು ಗ್ರಾಮದ ವದರಂಗಿ ಕೊರ್ಡೇಟ್ ಎಂಬಲ್ಲಿ ಮೇಯಲು ಬಿಟ್ಟ ದನಗಳನ್ನು ಯಾರೋ ಕಳ್ಳರು ಕಾರಿನಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ದನ ಕಳವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿತ್ತು.

ಈ ಪ್ರಕರಣದಲ್ಲಿ ದನಗಳನ್ನು ಕಳವು ಮಾಡಿರುವ ಆರೋಪಿತರ ಪತ್ತೆಯ ಬಗ್ಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜೆ.ಎಸ್. ಅವರು ವಿಶೇಷ ತಂಡವನ್ನು ರಚನೆ ಮಾಡಿ ಪಿ.ಎಸ್.ಐ. ರೇವಣಸಿದ್ದಪ್ಪ ಮತ್ತು ಕುಮಾರೇಶನ್ ಅವರು ಸಿಬ್ಬಂದಿಗಳೊಂದಿಗೆ ದನಗಳರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ರಿಡ್ಜ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ಮೂಡುಬಿದ್ರೆ ಪೊಲೀಸ್ ಠಾಣೆ, ಉಡುಪಿಯ ಅಜೇಕಾರು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದನ ಕಳವಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತವೆ. ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ.

ಪತ್ತೆ ಕಾರ್ಯಚರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್, ಕೆ. ರವಿಶಂಕರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ ಎ. ಮತ್ತು ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ರೇವಣಸಿದ್ದಪ್ಪ, ಕುಮಾರೇಶನ್, ಲತಾ, ಸಿಬ್ಬಂದಿಯವರಾದ ಸುಜನ್, ಮಂಜುನಾಥ, ರಶೀದ ಶೇಖ್, ದಯಾನಂದ, ಬಸವರಾಜ್ ಪಾಟೀಲ್, ಚಿದಾನಂದ, ಭರಮಾ ಬಡಿಗೇರ್, ಪ್ರಕಾಶ್ ಗೌಡ, ಮದು, ವಿದ್ಯಾ, ದುರ್ಗಾ ಪ್ರಸಾದ, ಸುರೇಶ್, ವಿರುಪಾಕ್ಷ, ಪರಸಪ್ಪ, ಪ್ರಜ್ವಲ್, ವಿರೇಶ್ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article