ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಪುಸ್ತಕ ಮೇಳ
Wednesday, December 4, 2024
ಮಂಗಳೂರು: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಶಕ್ತಿ ವಸತಿ ಶಾಲೆ ಮತ್ತು ಕಾಲೇಜು ಗ್ರಂಥಾಲಯದಲ್ಲಿ ಪುಸ್ತಕ ಮೇಳ ಮತ್ತು ಪುಸ್ತಕ ಪ್ರದರ್ಶನ ನ.21 ಮತ್ತು 22 ರಂದು ನಡೆಯಿತು.
ಪುಸ್ತಕ ಮೇಳದಲ್ಲಿ ಸುಮಾರು 4000 ಪುಸ್ತಕಗಳು ಪ್ರದರ್ಶನಗೊಂಡು, 2,50,000 ರೂ. ಮೌಲ್ಯದ ಪುಸ್ತಕಗಳು ಮಾರಾಟಗೊಂಡವು. ಈ ಪುಸ್ತಕ ಮೇಳವು ಮಕ್ಕಳಿಗೆ ಉಪಯುಕ್ತವಾದ ಆಂಗ್ಲ, ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳ ಪುಸ್ತಕಗಳನ್ನೋಳಗೊಂಡಿದ್ದು, ಧಾರ್ಮಿಕ ಗ್ರಂಥಗಳು, ವೀರಯೋಧರ ಚರಿತ್ರಾ ಪುಸ್ತಕಗಳು, ಮಕ್ಕಳ ಕಥೆ ಪುಸ್ತಕಗಳು, ಕಾದಂಬರಿಗಳು, ಮಕ್ಕಳಿಗೆ ಪ್ರಿಯವಾದ ಚಿತ್ರಕಲಾ ಪುಸ್ತಕಗಳು ಲಭ್ಯವಿದ್ದವು.
ಪುಸ್ತಕ ಮೇಳವನ್ನು ಶಕ್ತಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್ ಅವರು ಉದ್ಘಾಟಿಸಿದರು. ಪ್ರಧಾನ ಸಲಹೆಗಾರ ರಮೇಶ್ ಕೆ. ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತು ಶಕ್ತಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು. ಗ್ರಂಥಪಾಲಕಿಯರಾದ ಲಕ್ಷ್ಮೀ ಡಿ. ರೈ ಮತ್ತು ಲತಾ ಶ್ರೀಧರ್ ನಾಕ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

