
ಶಕ್ತಿನಗರದ ಮಹಿಳೆಯರಿಗೆ ‘ಶಕ್ತಿ’ ತುಂಬಿದ ಸರಕಾರ!: ಉಚಿತ ಬಸ್ ಸಂಚಾರಕ್ಕೆ ಚಾಲನೆ
Friday, December 6, 2024
ಮಂಗಳೂರು: ಶಕ್ತಿನಗರದ ಮಹಿಳೆಯರಿಗೆ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಬಸ್ ಪ್ರಯಾಣದ ಬಸ್ ಚಾಲನೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪಾಲ್ಗೊಂಡು ಬಸ್‌ಗೆ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, 2024ರ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು, ಮಾನವ ಹಾಗೂ ಮಾಹಿತಿ ಹಕ್ಕು ಘಟಕದ ಅಧ್ಯಕ್ಷ ಮನೋರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿ’ಸೋಜ ಹಾಗೂ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಿಳೆಯರ ಬಸ್ ಬೇಡಿಕೆಯ ಕುರಿತು ಮಂಜುನಾಥ ಭಂಡಾರಿಯವರು ಈ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಅದೀಗ ನೆರವೇರಿರುವುದು ಈ ಭಾಗದ ನಾಗರಿಕರ ಸಂತಸಕ್ಕೆ ಕಾರಣವಾಗಿದೆ.