
ಉಳ್ಳಾಲ ಮಂಜನಾಡಿ ಗ್ಯಾಸ್ ದುರಂತ, ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಬಾಲಕಿ ಮೃತ್ಯು,ಯು.ಟಿ. ಖಾದರ್ ಸಂತಾಪ
Saturday, December 28, 2024
ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಯಿಝ (9) ಇಂದು ಮೃತಪಟ್ಟಿದ್ದು ಸಭಾಧ್ಯಕ್ಷ ಯು.ಟಿ. ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರು, ಸ್ಥಳೀಯರು ನಾವೆಲ್ಲರೂ ಸೇರಿ ಗಾಯಾಳುಗಳ ರಕ್ಷಣೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಮನಸ್ಸಿಗೆ ಬಹಳ ಆಘಾತ ತಂದಿದೆ.ಅಲ್ಲಾಹು ಅವರ ಖಬರ್ ವಿಶಾಲವಾಗಿರಿಸಲಿ, ಕುಟುಂಬಸ್ಥರಿಗೆ, ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲು ಪ್ರಾರ್ಥಿಸುತ್ತೇನೆಂದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಅಲ್ಲದೆ ದುರಂತ ಸಂಭವಿಸಿದ ದಿನದಿಂದ ಇಂದಿನವರೆಗೂ ಸುಮಾರು ದಿನಗಳ ಕಾಲ ಕುಟುಂಬಸ್ಥರ ಜತೆಗಿದ್ದ ಸ್ಥಳೀಯ ಮುಖಂಡರಿಗೂ,ಸಂಘ ಸಂಸ್ಥೆಗಳ ಕಾರ್ಯ ವೈಖರಿ ಎಲ್ಲರಿಗೂ ಮಾದರಿ ಎಂದವರು ತಿಳಿಸಿದರು.