
ನವಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಐಷರಾಮಿ ನೌಕೆ
Saturday, December 28, 2024
ಮಂಗಳೂರು: ನವಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಹೆಸರಿನ ಎರಡನೇ ಐಷಾರಾಮಿ ನೌಕೆ ಶುಕ್ರವಾರ ಆಗಮಿಸಿದೆ.
ಬಹಮೇನ್‌ನ ಈ ಐಷಾರಾಮಿ ನೌಕೆಯನ್ನು ನವಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಬರಮಾಡಿಕೊಂಡರು. ಹೆಸರಾಂತ ನೇರ್ವೇಜಿನ್ ಕ್ರೂಸ್ಲೈನ್ನ ಭಾಗವಾಗಿರುವ ಈ ನೌಕೆ ಬೆಳಗ್ಗೆ ಆಗಮಿಸಿ ಸಂಜೆ ನಿರ್ಗಮಿಸಿದೆ.
ಸುಮಾರು 650 ಮಂದಿ ಪ್ರಯಾಣಿಕರು ಮತ್ತು 450 ಮಂದಿ ಸಿಬ್ಬಂದಿಗಳೊಂದಿಗೆ ಈ ನೌಕೆ ಫುಜೈರಾದಿಂದ ಕೊಲಂಬೋ, ಮುಂಬೈ, ಗೋವಾ, ಮಂಗಳೂರು ಆಗಿ ಕೊಚ್ಚಿನ್ ಮೂಲಕ ಪ್ರಯಾಣ ಮುಂದುವರಿಸಿದೆ. ನೌಕೆಯಲ್ಲಿನ ಪ್ರವಾಸಿಗರು ಕಾರ್ಕಳ ಗೊಮ್ಮಟೇಶ್ವರ, ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದರು.