
ಪೊಲೀಸ್ ಕಮೀಷನರ್ ವರ್ಗಾವಣೆ ಅಸಾಧ್ಯವಾದರೆ ಜಿಲ್ಲಾಡಳಿತದ ಕಾರ್ಯಕ್ರಮಗಳಿಗೆ ಮುತ್ತಿಗೆ: ಯೋಗೀಶ್ ಜಪ್ಪಿನಮೊಗರು ಎಚ್ಚರಿಕೆ
ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮೀಷನರ್ ವಿನಾಃ ಕಾರಣ ಹೋರಾಟಗಾರರ ಮೇಲೆ ಎಫ್‌ಐಆರ್ ದಾಖಲಿಸುವ, ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿರುವುದು ಸಂವಿಧಾನ ವಿರೋಧಿ ಮತ್ತು ಈ ನೆಲದ ಕಾನೂನು ವಿರೋಧಿ ನಡೆಯಾಗಿದೆ ಇಂತಹ ವರ್ತನೆ ಬದಲಾಯಿಸದಿದ್ದರೆ ಕಮೀಷನರ್ ಅಗ್ರವಾಲರು ಮಂಗಳೂರಿಗೆ ಬೇಕಾಗಿಲ್ಲ ಕೂಡಲೇ ವರ್ಗಾಯಿಸಲು ಕ್ರಮಕೈಗೊಳ್ಳಿ ಇಲ್ಲವೆಂದಾದರೆ ಜಿಲ್ಲಾಡಳಿತ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಎಚ್ಚರಿಸಿದರು.
ಅವರು ಇಂದು ಡಿವೈಎಫ್‌ಐ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ನಗರದ ಪಂಪ್‌ವೆಲ್ ವೃತ್ತದ ಬಳಿ ಕಮೀಷನರ್ ಅಗ್ರವಾಲರ ವರ್ಗಾವಣೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ಜನಪರ ಇರಬೇಕಾದ ಜನಪ್ರತಿನಿಧಿಗಳು ಜನವಿರೋಧಿಯಾಗಿರುವ ಕಮೀಷನರ್ ಪರ ಬ್ಯಾಟಿಂಗ್ ಮಾಡುವ ನಡೆ ಒಳ್ಳೆಯದಲ್ಲ. ಪೊಲೀಸ್ ಇದ್ದದಕ್ಕೆ ಜನ ನೆಮ್ಮದಿಯಿಂದ ಮಲಗುವಂತಾಗಿದೆ ಎಂದರೆ ಅದು ರಾತ್ರಿಹೊತ್ತು ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯಲಿ ಎಂದರ್ಥವೇ. ಮಂಗಳೂರನ್ನು ಅತೀ ಬೇಗ ಸ್ತಭ್ದಮಾಡಿ ಅಕ್ರಮ ದಂಧೆಗಳು, ಮರಳುಗಾರಿಕೆ, ಇಸ್ಪೀಟ್ ಕ್ಲಬ್‌ಗಳಿಗೆ ತೊಂದರೆಯಾಗದಂತೆ ಜನರನ್ನು ಅತೀ ಬೇಗನೇ ಮಲಗಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಕಮೀಷನರ್‌ನನ್ನು ಕೂಡಲೇ ವರ್ಗಾಯಿಸಬೇಕು ಇಲ್ಲದೆ ಹೋದಲ್ಲಿ ಹೋರಾಟ ಇನ್ನಷ್ಟು ತೀವೃಹಂತಕ್ಕೆ ಕೊಂಡೊಯ್ಯಲಿದ್ದೇವೆ ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ತಯ್ಯೂಬ್ ಬೆಂಗರೆ, ರಿಜ್ವಾನ್ ಹರೇಕಳ, ಪ್ರಮೀಳಾ ಶಕ್ತಿನಗರ, ನಾಗೇಶ್ ಕೋಟ್ಯಾನ್, ಮನೋಜ್ ಉರ್ವಸ್ಟೋರ್, ಶಶಿಧರ್ ಶಕ್ತಿನಗರ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್‌ಐ, ಸಿಪಿಐಎಂ ಮುಖಂಡರಾದ ವರಪ್ರಸಾದ್, ಜಯಪ್ರಕಾಶ್ ಜಲ್ಲಿಗುಡ್ಡೆ, ಸಾಧಿಕ್ ಕಣ್ಣೂರು, ಉಸ್ಮಾನ್ ಕಣ್ಷೂರು, ಗೀತಾ ಜಲ್ಲಿಗುಡ್ಡೆ, ರೋಹಿಣಿ ಜಲ್ಲಿಗುಡ್ಡೆ, ಉದಯಚಂದ್ರ ರೈ, ದಿನೇಶ್ ಶೆಟ್ಟಿ, ನಾಗೇಶ್ ಕೋಟ್ಯಾನ್, ಅನ್ಸಾರ್ ಫೈಸಲ್ ನಗರ, ಭಾರತೀ ಬೋಳಾರ, ಜಯಲಕ್ಷ್ಮಿ ಜಪ್ಪಿನಮೊಗರು, ಮೋಹನ್ ಜಲ್ಲಿಗುಡ್ಡೆ, ರಾಧಾಕೃಷ್ಣ ಬೊಂಡಂತಿಲ, ಕೃಷ್ಣ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು. ದೀಪಕ್ ಬಜಾಲ್ ಸ್ವಾಗತಿಸಿ, ನಿರೂಪಿಸಿದರು. ಲೋಕೇಶ್ ಎಂ. ವಂದಿಸಿದರು.