ಪೇಜಾವರ ಶ್ರೀಗಳ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ

ಪೇಜಾವರ ಶ್ರೀಗಳ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ

ಮಂಗಳೂರು: ಪೇಜಾವರ  ಸ್ವಾಮೀಜಿ ಅವರು ಸಂವಿಧಾನಕ್ಕೆ ಬದ್ಧರಾಗಿದ್ದು ಹಿಂದು ಸಮಾಜದ ಸರ್ವರಿಗೂ ಸಮಾನ ಗೌರವ ಕೊಡುತ್ತ ಬಂದಿದ್ದು ವಿಶೇಷವಾಗಿ ದಲಿತರನ್ನು ಕೂಡ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದಾರೆ .ರಾಜ್ಯಪಾಲರನ್ನು ಭೇಟಿಯಾದಾಗ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ಜೊತೆ ಗೆ ಇದ್ದೆವು .ಆ ಸಂದರ್ಭ ಸಂವಿಧಾನವನ್ನು ಬದಲಾಯಿಸವ ಯಾವ ಹೇಳಿಕೆ ಹೇಳಿರುವುದಿಲ್ಲ. ಆದರೂ ಕೆಲವೊಂದು ಸಂಘಟನೆಗಳು ಸ್ವಾಮಿಜಿಯವರ ಹೇಳಿಕೆ ಯನ್ನು ಅರ್ಥ ಮಾಡಿಕೊಳ್ಳದೆ  ಶ್ರೀ ಗಳ ಬಗ್ಗೆ ಸುಳ್ಳು ಸುದ್ದಿ ಹೇಳಿಕೆ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸಿದೆ.

ಪೇಜಾವರ ಸ್ವಾಮೀಜಿಯವರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಆಯಾ ಸಂಘಟನೆಯವರು ಹಿಂದೆ ತೆಗೆದುಕೊಳ್ಳಬೇಕು ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತು ಸರಕಾರ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article