ಜಾತಿ ಉಪಜಾತಿ ಗೊಂದಲಗಳಿಗೆ ತೆರೆ ಎಳೆಯಲು ಆಗ್ರಹ

ಜಾತಿ ಉಪಜಾತಿ ಗೊಂದಲಗಳಿಗೆ ತೆರೆ ಎಳೆಯಲು ಆಗ್ರಹ

ಮಂಗಳೂರು: ಪರಿಶಿಷ್ಟ ಜಾತಿವಾರು ಪಟ್ಟಿಗಳ ಉಪಜಾತಿ ಆದಿ ದ್ರಾವಿಡ (ತುಳು ಭಾಷಿಕರಿಗೆ ಮೀಸಲಾತಿ ವರ್ಗಿಕರಣ ಅನುಪಾತದಡಿಯಲ್ಲಿ ಗರಿಷ್ಠ  ಪ್ರಮಾಣದಲ್ಲಿ ಹಂಚಿಕೆ ಮಾಡಿ ಸಹಕರಿಸುವಂತೆ ಹಾಗೂ ನಿಷೇಧಿತ ,ನಿಂದನಾತ್ಮಕ ,ಬೈಗುಳ ಪದ " ಮನ್ಸ" ಜಾತಿಯನ್ನು ಜಾತಿವಾರು ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಬಾರದಾಗಿ ಸರಕಾರಕ್ಕೆ ಒಕ್ಕೊರಲ ಆಗ್ರಹಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ರಾಮಕುಮಾರ್, ಬಿಲ್ಲವ ಸಮಾಜದಲ್ಲಿ ಗೊಂದಲವಿರುವಾಗ ಮಧ್ಯೆ ಪ್ರವೇಶಿಸಲು ಬಿ.ಕೆ ಹರಿಪ್ರಸಾದ್ ಯಾರು ಎಂದು ಆಕ್ರೊಶ ಹೊರಹಾಕಿದರು ಈ ಬಗ್ಗೆ ಸರಕಾರ ಅಸಡ್ಡೆ ತೊರುತ್ತಿದೆ ಎಂದು ಹೇಳಿದರು, ಮೀಸಲಾತಿ ಸವಿಂಧಾನದ ಭಾಗವಾಗಿದ್ದು ಇದೀಗ ಒಳ ಮಿಸಲಾತಿಯಲ್ಲಿ 101 ಉಪಜಾತಿವಿಯೆಂದು ಹೇಳಿದರು,

ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳು ಜೀವನೋಪಾಯಕ್ಕಾಗಿ ಚಿಕ್ಕಮಗಳೂರು, ಹಾಸನ,ಹಾಗೂ ಇನ್ನಿತರ ಸ್ಥಳಗಳಿಗೆ ವಲಸೆಹೋಗಿದ್ದು ಇದೀಗ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಉಂಟಾಗಿದೆ. ಈ ಮೇಲಿನ ಉಲ್ಲೆಖಕ್ಕೆ ಪುರಾವೆಯಾಗಿ 1900 ರಲ್ಲಿ ಪುತ್ತೂರಿನ ಮಂಜಲ್ಪಾಡ್ಪು ಪ್ರದೇಶದಲ್ಲಿ ಜರ್ಮನಿ ಮಿಷನರಿಯಿಂದ ಆದಿ ದ್ರಾವಿಡ ಅಂಗನವಾಡಿ ಹಾಗೂ ಶಾಲೆಯಿರುವ ಬಗ್ಗೆ ಸುಧಾನ ರೆಸಿಡೆನ್ಸಿ ಸ್ಕೂಲ್ ರೆ. ಫಾ. ವಿಜಯ್ ಹಾರ್ವಿನ್ ಒದಗಿಸಿದ ಸೂವೆನೈರಿ ಪುಸ್ತಕದಲ್ಲಿ ನ ಚಿತ್ರ ಲೇಖನ ,ಹಾಗೇಯೆ ಸ್ವತಂತ್ರ ಪೂರ್ವದ 1941 ರಲ್ಲಿ ಮೂಡಬಿದರೆಯ ಪ್ರಾತ್ಯ ಗ್ರಾಮದ ನಮ್ಮ ಸಮುದಾಯದ ಶ್ರೀ ಮತಿ ಬಿರ್ಕು ಎಂಬ ಹೆಂಗಸಿಗೆ ಬ್ರಿಟಿಷ್ ಸರ್ಕಾರದಿಂದ ಜಾಗದ ಹಕ್ಕು ಪತ್ರ ನೀಡಿದ ದಾಖಲೆಯಲ್ಲಿ ಲಗತ್ತಿಸಿದೆ ಎಂದರು.

ಹಾಸನ, ಚಿಕ್ಕಮಗಳೂರು ಜಿಲ್ಲೆಯ ಮೂಲನಿವಾಸಿಗಳು ವಲಸೆ ಹೊಗಿದ್ದು , ಸಂಘದ ವತಿತಿಂದ ಮನ್ಸ ಜಾತಿ ಎಂಬ ಪದ ಬಳಕೆಯವಿರುದ್ದ ಹೋರಾಟ ಮಾಡುತ್ತಿದ್ದು, ಹಾಗೂ ಸರಕಾರದ ಮನವಿ ಮಾಡುತ್ತಾರೆಂದು ತಿಳಿಸಿದ್ದಾರೆ, ನಮಗೆ ನೀಡಿದ ಪ್ರಮಾಣ ಪತ್ರ ವನ್ನು ಮುಂದುವರೆಸಬೇಕಾಗಿ ಸರಕಾರಕ್ಕೆ ವಿನಂತಿಸಿದ್ದಾರೆ. ಏಳು ರೂಪದಲ್ಲಿ ಹೆಸರನ್ನು ಬಳಸುತ್ತಿದ್ದು ಆದಿದ್ರಾವಿಡ ಸಂಘ ಸರಕಾರಕ್ಕೆ ಒತ್ತಾಯಿಸುತ್ತಿದೆ ಎಂದು ಹೇಳಿದರು.

ಜಾತಿ ಜಾತಿ ಮಧ್ಯೆ ಸಂಘರ್ಷ ಬಿತ್ತುವವರ ವಿರದ್ದು ಕಾನೂನು ಕ್ರಮ ವಹಿಸಬೇಕಾಗಿ  ಎಚ್.ಎಮ್ ಸೊಮಪ್ಪ ಸರಕಾರಕ್ಕೆ ಅಗ್ರಹಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ 7 ವಿವಿಧ ಪಟ್ಟಿಯಲ್ಲಿ ಗೊಂದಲವಿದ್ದು ,ಒಂದು ತಂದೆಯ ಎರಡು ಮಕ್ಕಳಿಗೆ ಎರಡು  ಜಾತಿ ಪ್ರಮಾಣಪತ್ರವಿದ್ದು ಈ ಬಗ್ಗೆ ಸರಕಾರ ಹೆಚ್ಚತ್ತು ಸೂಕ್ತ ಕ್ರಮವಹಿಸಬೇಕೆಂದರು.

ಶಂಕರ್, ಜಿಲ್ಲಾಧ್ಯಾಕ್ಷ ಸಂಜೀವ ಕೋಟ್ಯಾನ್,ಕೃಷ್ಣ ಸೂಟರ್ ಪೇಟೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article