ಶೀಘ್ರದಲ್ಲಿ ಬೆಂಗ್ರೆಯ ಹಕ್ಕುಪತ್ರ ಸಮಸ್ಯೆ ಇತ್ಯರ್ಥ: ಶಾಸಕ ಕಾಮತ್

ಶೀಘ್ರದಲ್ಲಿ ಬೆಂಗ್ರೆಯ ಹಕ್ಕುಪತ್ರ ಸಮಸ್ಯೆ ಇತ್ಯರ್ಥ: ಶಾಸಕ ಕಾಮತ್


ಮಂಗಳೂರು: ಮಂಗಳೂರಿನ ಬೆಂಗ್ರೆ ಪರಿಸರದಲ್ಲಿ 1994ರಲ್ಲಿ ನೀಡಲಾಗಿದ್ದ ಹಕ್ಕುಪತ್ರಕ್ಕೆ ಖಾತಾ ನೀಡುವುದು ಹಾಗೂ ಈವರೆಗೂ ಹಕ್ಕುಪತ್ರ ಸಿಗದವರಿಗೆ ತೆಗೆಸಿಕೊಡುವ ಬಗ್ಗೆ ದ.ಕ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿದರು.

ಹಕ್ಕುಪತ್ರ ವಿತರಣೆಯಲ್ಲಿ ಇಲ್ಲ ಸಲ್ಲದ ಗೊಂದಲಗಳಿಂದ ವಿಳಂಬ ನೀತಿ ಅನುಸರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಕೂಡಲೇ ಜನಪರವಾದ ಧೃಢ ನಿರ್ಣಯ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಸಭೆಯ ನಂತರ, ಸುಮಾರು 40 ವರ್ಷಗಳಿಂದ ಪರಿತಪಿಸುತ್ತಿರುವ ಬೆಂಗ್ರೆ ಪರಿಸರದ ಜನತೆಗೆ ಶೀಘ್ರದಲ್ಲಿ ಸಿಹಿಸುದ್ದಿ ಸಿಗಲಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು, ತಹಶಿಲ್ದಾರ್, ಪಾಲಿಕೆ ಆಯುಕ್ತರು, ಕಂದಾಯ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article