ಜ.5ರಿಂದ ಮೂಡುಬಿದಿರೆ ಜೈನಮಠದಲ್ಲಿ ಭರತನಾಟ್ಯ ತರಗತಿ ಆರಂಭ

ಜ.5ರಿಂದ ಮೂಡುಬಿದಿರೆ ಜೈನಮಠದಲ್ಲಿ ಭರತನಾಟ್ಯ ತರಗತಿ ಆರಂಭ


ಮೂಡುಬಿದಿರೆ: ಶ್ರೀದೇವಿ ನೃತ್ಯ ಕೇಂದ್ರದ ಸುವರ್ಣ ಸಂಭ್ರಮದಲ್ಲಿದ್ದು, ನಾಟ್ಯಲಯದ ದ್ವಿತೀಯ ಶಾಖೆಯು ಮೂಡುಬಿದಿರೆ ಯ ದವಳತ್ರಯ ಜೈನ ಕಾಶಿ ಟ್ರಸ್ಟ್, ಶ್ರೀ ದಿಗಂಬರ ಜೈನ ಮಠ ಸಹಯೋಗದಲ್ಲಿ ರಮಾರಾಣಿ ಶೋಧ ಸಂಸ್ಥಾನ ಸಭಾ ಭವನದಲ್ಲಿ ಜನವರಿ 5ರಿಂದ ಆರಂಭಗೊಳ್ಳಲಿದೆ. 

ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿ, ಕಲಾವಿದೆ ಆರತಿ ಹರೀಶ್ ಶೆಟ್ಟಿ ದಂಪತಿ ಹಾಗೂ ನೃತ್ಯ ಶಿಕ್ಷಕಿ ನಯನ ಕುಮಾರಿ ಮಿಜಾರು ಅವರನ್ನು ಗೌರವಿಸಿದರು.

ಈ ಕುರಿತು ಮಾಹಿತಿ ನೀಡಿದ ಭಟ್ಟಾರಕ ಸ್ವಾಮೀಜಿ, ಮಂಗಳೂರು, ಮುಂಬೈನಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಶಾಂತಲಾ ಪ್ರಶಸ್ತಿ ವಿಜೇತೆ ಜಯಲಕ್ಷ್ಮೀ ಆಳ್ವ ಪ್ರಾರಭಗೊಂಡಿರುವ ಶ್ರೀದೇವಿ ನೃತ್ಯ ಕೇಂದ್ರವನ್ನು ಅವರ ಪುತ್ರಿ ಡಾ.ಆರತಿ ಶೆಟ್ಟಿ ಮುನ್ನಡೆಸುತ್ತಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ 4.30 ಮತ್ತು ಭಾನುವಾರದಂದು ಬೆಳಗ್ಗೆ 10 ಗಂಟೆಗೆ ತರಗತಿಗಳು ತರಗತಿಯು ನಡೆಯಲಿದೆ. ಆಸಕ್ತರು ತರಗತಿಗೆ ಸೇರಬಹುದು ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article