ನಿಡ್ಡೋಡಿಯಲ್ಲಿ ಅಕ್ರಮ ಕಲ್ಲುಕೋರೆ: ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಿದ ಲೋಕಾಯುಕ್ತರು

ನಿಡ್ಡೋಡಿಯಲ್ಲಿ ಅಕ್ರಮ ಕಲ್ಲುಕೋರೆ: ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಿದ ಲೋಕಾಯುಕ್ತರು


ಮೂಡುಬಿದಿರೆ: ನಿಡ್ಡೋಡಿಯಲ್ಲಿ ಪರವಾನಿಗೆಯಿಲ್ಲದೆ ಅನಧಿಕೃತವಾಗಿ ನಡೆಯುತ್ತಿದ್ದ ಕೆಂಪುಕಲ್ಲಿನ ಕೋರೆಗಳಿಗೆ ಉಪಲೋಕಾಯುಕ್ತ ಜ. ವೀರಪ್ಪ ಅವರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು ಅಲ್ಲಿದ್ದ ಯಂತ್ರೋಪಕರಣಗಳನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ನಿಡ್ಡೋಡಿಯಲ್ಲಿ ಹಲವು ಕೆಂಪು ಕಲ್ಲಿನ ಕೋರೆಗಳು ಪರವಾನಿಗೆಯ ಅವಧಿ ಮುಗಿದಿದ್ದರೂ ಕಾರ್ಯಚರಿಸುತ್ತಿದ್ದವು ಅಲ್ಲದೆ ಈ ಪ್ರದೇಶದಲ್ಲಿ ಜನಸಾಮಾನ್ಯರು ನಡೆದುಕೊಂಡು ಹೋಗಲು ಹೆದರುವ ಸಂದರ್ಭ ಬಂದಿರುವುದರಿಂದ ಸಾರ್ವಜನಿಕರು ಲೋಕಾಯುಕ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಜೆಸಿಬಿ ಜೊತೆ ಕಾರ್ಮಿಕರು ತಪ್ಪಿಸಿಕೊಂಡಿದ್ದಾರೆ.

ಈ ಸಂದರ್ಭ ಮೂಡುಬಿದಿರೆಯ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article