ಪುರಸಭೆ ಸಿಬ್ಬಂದಿ ಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಆರೋಪಿ ಬಂಧನ
ಉಳ್ಳಾಲ: ಸೋಮೇಶ್ವರ ಪುರಸಭೆಯಲ್ಲಿ ರೆವಿನ್ಯೂ ಆಫೀಸರ್ ಪುರುಷೋತ್ತಮ ರವರ ಮೊಬೈಲ್ ಗೆ ಕರೆ ಮಾಡಿ ಬ್ಲ್ಯಾಕ್ ಕ್ ಮೇಲ್ ಮಾಡಲು ಯತ್ನಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆಂಧ್ರ ಮೂಲದ ಧನಂಜಯ ರೆಡ್ಡಿ ತೋಟ ಎಂದು ಗುರುತಿಸಲಾಗಿದೆ.
ಈತ 2024 ಎಪ್ರಿಲ್ 6 ರಂದು ಈತ ಸೋಮೇಶ್ವರ ಪುರಸಭೆ ರೆವೆನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್ ಗೆ ಕರೆ ಮಾಡಿ ನಾನು ಲೋಕಾಯುಕ್ತ ದಿಂದ ಕರೆ ಮಾಡುವುದು ಎಂದು ತಿಳಿಸಿದ್ದ.ಬಳಿಕ ಅವರನ್ನು ಬೆದರಿಸಿ ಇಂತಿಷ್ಟು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ.
ಟ್ರೂ ಕಾಲರ್ ಪರಿಶೀಲನೆ ನಡೆಸಿದಾಗ ಪ್ರಭಾಕರ್ ಲೋಕಾಯುಕ್ತ ಎಂದು ಬಂದಿತು.ಈ ಬಗೆ ಪುರುಷೋತ್ತಮ ಅವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಲೋಕಾಯುಕ್ತ ಪೊಲೀಸರು ಅಂತಹ ಅಧಿಕಾರಿ ನಮ್ಮ ಕಚೇರಿಯಲ್ಲಿ ಇಲ್ಲ ಎಂದು ತಿಳಿಸಿದ್ದರು. ಅಲ್ಲದೇ ಪುರಸಭೆ ಯ ಉಳಿದ ಇಬ್ಬರು ಸಿಬ್ಬಂದಿ ನಾಯರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕಕೃಷ್ಣ. ಆರ್. ರವರಿಗೆ ಇದೇ ರೀತಿ ಬೆದರಿಕೆ ಕರೆ ಬಂದಿತ್ತು.ಈ ಬಗೆ ಪುರುಷೋತ್ತಮ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದಾಗ ಆಂಧ್ರಪ್ರದೇಶದಲ್ಲಿ ಆರೋಪಿ ಇರುವ ಮಾಹಿತಿ ಲಭಿಸಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.