
ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹದ ಮಾಹಿತಿ ಕಾರ್ಯಾಗಾರ
Monday, January 20, 2025
ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮ ಪಂಚಾಯತ್‌ನಲ್ಲಿ ಮಹಿಳಾ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಅಂಗನವಾಡಿ ಕಾರ್ಯಕರ್ತೆ ವಿಜಯ ವಾಣಿ ಅವರು ಮಹಿಳಾ ದೌರ್ಜನ್ಯ ಹಾಗೂ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ಉಪಧ್ಯಾಕ್ಷ ಗಣೇಶ್ ಸಾಲಿಯಾನ್, ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಪಂಚಾಯತ್ ಸದಸ್ಯರಾದ ಜಯಂತಿ ಶ್ರೀಧರ, ಜಯಂತಿ ನಾಗೇಶ್, ಆತಿಕಾಬಾನು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚವ್ಹಾನ್, ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ., ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪಧಾದಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.