
ಜೂಡೋ: ತೇಜ ಜೆ.ಗೆ ಕಂಚಿನ ಪದಕ
Tuesday, January 21, 2025
ಬಂಟ್ವಾಳ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಒಲಂಪಿಕ್ ಅಸೋಸಿಯೇಷನ್ ಜಿಲ್ಲಾಡಳಿತ ಮಂಗಳೂರು ಹಾಗೂ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕ್ರೀಡಾಕೂಟ-2025 ಜೂಡೋ ವಿಭಾಗದಲ್ಲಿ ತೇಜ ಜೆ. ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇವರು ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಇವರಿಂದ ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಪೊಳಲಿ ಸುಬ್ರಾಯ ಕಾರಂತರು ಸಹಕರಿಸಿದ್ದಾರೆ.
ಮಿಕ್ಸೆಡ್ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರು ಕಳೆದ ಹಲವಾರು ವರ್ಷಗಳಿಂದ ಪೊಳಲಿ ಸುಮಂಗಳ ಸಭಾಭವನ ಹಾಗೂ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೂಡೋ, ಟ್ವಿಂಕಾಡೋ, ಸ್ಕೇಟಿಂಗ್ ಮೊದಲಾದ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು ಆಸಕ್ತರು ಅವರನ್ನು ಸಂಪರ್ಕಿಸಬಹುದಾಗಿದೆ.