
ಅಂಬ್ಯುಲೆನ್ಸ್‌ಗೆ ಇನೋವಾ ಢಿಕ್ಕಿ: ಎರಡೂ ವಾಹನ ಜಖಂ
Thursday, January 23, 2025
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಢಿಕ್ಕಿ ಹೊಡೆದ ಘಟನೆ ನಡೆದಿದ್ದು, ಪರಿಣಾಮ ಎರಡು ವಾಹನಗಳು ಜಖಂಗೊಂಡಿದೆ. ಇದರಿಂದಾಗಿ ಯಾರೂ ಗಾಯವಿಲ್ಲದೆ ಅಪಾಯವಿಲ್ಲದೆ ಪಾರಾಗಿದ್ದಾರೆ.
ವಿಟ್ಲದಿಂದ ರೋಗಿಯೊಇರ್ವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಢಿಕ್ಕಿಯಾಗಿದೆ.
ತುಂಬೆ ಸಮೀಪದ ಕಡೆಗೋಳಿಯಲ್ಲಿ ಅಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ ಶಬ್ದ ಬಂದ ಕಾರಣಕ್ಕೆ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಕರುಣಾಕರ ಅವರು ಪರಿಶೀಲನೆ ಮಾಡುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಧಾವಿಸಿ ಬಂದ ಇನ್ನೋವ ಕಾರು ಅಂಬ್ಯುಲೆನ್ಸ್ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಘಟನೆಯಿಂದಾಗಿ ಎರಡು ವಾಹನಗಳು ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.